ನನ್ನ ಪತಿ ಇತರರ ಮೇಲೆ ಹಲ್ಲೆ ಮಾಡುವುದನ್ನು ಊಹಿಸಲೂ ಸಾಧ್ಯವಿಲ್ಲ, ಮೊತ್ತ ಮೊದಲ ಬಾರಿಗೆ ಅವರು ವ್ಯಗ್ರರಾಗಿರುವುದನ್ನು ನೋಡುತ್ತಿದ್ದೇನೆ. ಅಧಿಕಾರಿಯ ದುರ್ವರ್ತನೆಯಿಂದಾಗಿ ಅವರು ಆ ರೀತಿ ಪ್ರತಿಕ್ರಿಯಿಸಿದ್ದಾರೆಂದು ಗಾಯಕ್ವಾಡ್ ಪತ್ನಿ ಉಷಾ ಮುಂಬೈ ಮಿರರ್’ಗೆ ತಿಳಿಸಿದ್ದಾರೆಂದು ವರದಿಯಾಗಿದೆ.

ಮುಂಬೈ (ಮಾ.25): ಏರ್ ಇಂಡಿಯಾ ಅಧಿಕಾರಿ ಪ್ರಧಾನಿ ಮೋದಿಗೆ ಅಗೌರವ ತೋರಿದ್ದನ್ನು ತನ್ನ ಗಂಡನಿಂದ ಸಹಿಸಲಾಗದೇ ಅವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆಂದು ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಪತ್ನಿ ಹೇಳಿದ್ದಾರೆ.

ನನ್ನ ಪತಿ ಇತರರ ಮೇಲೆ ಹಲ್ಲೆ ಮಾಡುವುದನ್ನು ಊಹಿಸಲೂ ಸಾಧ್ಯವಿಲ್ಲ, ಮೊತ್ತ ಮೊದಲ ಬಾರಿಗೆ ಅವರು ವ್ಯಗ್ರರಾಗಿರುವುದನ್ನು ನೋಡುತ್ತಿದ್ದೇನೆ. ಅಧಿಕಾರಿಯ ದುರ್ವರ್ತನೆಯಿಂದಾಗಿ ಅವರು ಆ ರೀತಿ ಪ್ರತಿಕ್ರಿಯಿಸಿದ್ದಾರೆಂದು ಗಾಯಕ್ವಾಡ್ ಪತ್ನಿ ಉಷಾ ಮುಂಬೈ ಮಿರರ್’ಗೆ ತಿಳಿಸಿದ್ದಾರೆಂದು ವರದಿಯಾಗಿದೆ.

ಅವರು ಎಂದಿಗೂ ಕೋಪಗೊಳ್ಳುವುದನ್ನು ನಾನು ನೋಡಿಲ್ಲ, ಎಲ್ಲರೊಂದಿಗೂ ಸ್ನೇಹದಿಂದ ವರ್ತಿಸುತ್ತಾರೆ ಎಂದು ಉಷಾ ಹೇಳಿದ್ದಾರೆ.

ಕೆಲ ವರ್ಷಗಳ ಮುಂಚೆ ರಮಝಾನ್ ತಿಂಗಳಿನಲ್ಲಿ ದೆಹಲಿಯ ಮಹಾರಾಷ್ಟ್ರ ಭವನದ ಮುಸ್ಲಿಮ್ ಉದ್ಯೋಗಿಯೊಬ್ಬನಿಗೆ ಗಾಯಕ್ವಾಡ್ ಬಲವಂತವಾಗಿ ತಿಂಡಿಯನ್ನು ಬಾಯಿಗೆ ತುರುಕಿಸಿ ವಿವಾದಕ್ಕೊಳಗಾಗಿದ್ದರು.

(ಚಿತ್ರಕೃಪೆ: ಫೈನಾನ್ಶಿಯಲ್ ಎಕ್ಸ್'ಪ್ರೆಸ್)