ಮುಸಲ್ಮಾನ ಸಮುದಾಯದ ವಿರುದ್ಧ ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ| ವಿವಾದಾತ್ಮಕ ಹೇಳಿಕೆಯಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್| ಶಾಸಕನ ವಿರುದ್ಧ ಕ್ರಮ ಕೈಗೊಳ್ಳುತ್ತಾ ಕಮಲ ಪಾಳಯ?
ಲಕನೋ[ಜು.15]: ಉತ್ತರ ಪ್ರದೇಶದ ಬಾಲಿಯಾದ ಬಾರಿಯಾದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಫೇಮಸ್. ತಮ್ಮ ಹೇಳಿಕೆಗಳಿಂದ ಪಕ್ಷಕ್ಕೆಷ್ಟು ಡ್ಯಾಮೇಜ್ ಆಗುತ್ತದೆ ಎಂಬ ಮುಂದಾಲೋಚನೆ ಇಲ್ಲದೆಯೇ ನೀಡುವ ಅವರ ಹೇಳಿಕೆಗಳಿಂದ ಹಲವಾರು ಬಾರಿ ಕಮಲ ಪಾಳಯ ತಲೆ ತಗ್ಗಿಸುವಂತಾಗಿದೆ. ಹೀಗಿದ್ದರೂ ಸುಮ್ಮನಾಗದ ಸುರೇಂದ್ರ ಸಿಂಗ್ ತಮ್ಮ ವಿವಾದಾತ್ಮಕ ಹೇಳಿಕೆಗಳನ್ನು ಮುಂದುವರೆಸಿದ್ದು, ಈ ಬಾರಿ ಮುಸ್ಲಿಂ ಸಮುದಾಯದ ಕೆಂಗಣ್ಣಿಗೀಡಾಗಿದ್ದಾರೆ.
ಮುಸಲ್ಮಾನ ಸಮುದಾಯದ ವಿರುದ್ಧ ಕಿಡಿ ಕಾರಿರುವ ಸುರೇಂದ್ರ ಸಿಂಗ್ 'ನಿಮಗೆ ಗೊತ್ತಾ, ಮುಸ್ಲಿಂ ಸಮುದಾಯದಲ್ಲಿ ವ್ಯಕ್ತಿಯೊಬ್ಬ 50 ಪತ್ನಿಯರನ್ನಿಟ್ಟುಕೊಂಡು ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಹಡೆಯುತ್ತಾರೆ. ಇದು ಅವರ ಪರಂಪರೆಯಲ್ಲ ಬದಲಾಗಿ ಪ್ರಾಣಿಗಳಂತ ನಡವಳಿಕೆ. ಇಂದು ದೇಶದ ಜನಸಂಖ್ಯೆ ಬಹುದೊಡ್ಡ ಸವಾಲಾಗಿ ಎದುರಾಗಿದೆ. ಹೀಗಿರುವಾಗ ಮುಸ್ಲಿಂ ಸಮುದಾಯದವರು ದೇಶದ ಪರ ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು' ಎಂದಿದ್ದಾರೆ.
ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ತೆರವುಗೊಳಿಸಲು ಮುಂದಾಗಿದ್ದ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರ ಮೇಲೆ ಬಿಜೆಪಿಯ ಹಿರಿಯ ನಾಯಕ ವಿಜಯ್ ವರ್ಗೀಯಾ ಅವರ ಪುತ್ರ, ಇಂದೋರ್ 3 ಕ್ಷೇತ್ರದ ಶಾಸಕರೂ ಆಗಿರುವ ಆಕಾಶ್ ವರ್ಗೀಯಾ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿ ಜೈಲು ಸೇರಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಪಕ್ಷ ಅವರ ನಡೆಯನ್ನು ಟೀಕಿಸಿತ್ತು ಎಂಬುವುದು ಉ್ಲಲೇಖನೀಯ.
ಸಿಕ್ಸರ್ ಹೊಡೆದಂಗೆ ಅಧಿಕಾರಿಗಳ ಥಳಿಸಿದ ಶಾಸಕ!
ಸದ್ಯ ಶಾಸಕ ಸುರೇಂದ್ರ ಸಿಂಗ್ ಈ ಹೇಳಿಕೆ ಪಕ್ಷಕ್ಕೆ ಮುಜುಗರ ಉಂಟು ಮಾಡುವುದರೊಂದಿಗೆ, ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷ ಶಾಸಕನ ವಿರುದ್ಧ ಯಾವುದಾದರೂ ಕ್ರಮ ಕೈಗೊಳ್ಳುತ್ತಾ ಅಥವಾ ಶಾಸಕನ ಇಂತಹ ಹೇಳಿಕೆಗಳು ಮುಂದುವರೆಯುತ್ತಾ ಕಾಲವೇ ಉತ್ತರಿಸಲಿದೆ.
