ತ್ರಿವಳಿ ತಲಾಖ್ ಬಗ್ಗೆ ಐತಿಹಾಸಿಕ ತೀರ್ಪು ನೀಡಿ ಮುಸಲ್ಮಾನ ಮಹಿಳೆಯರಿಗೆ ರಿಲೀಫ್ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಇನ್ನೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ.

ನವದೆಹಲಿ (ಡಿ.31): ತ್ರಿವಳಿ ತಲಾಖ್ ಬಗ್ಗೆ ಐತಿಹಾಸಿಕ ತೀರ್ಪು ನೀಡಿ ಮುಸಲ್ಮಾನ ಮಹಿಳೆಯರಿಗೆ ರಿಲೀಫ್ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಇನ್ನೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಸಲ್ಮಾನರ ಪವಿತ್ರ ಧಾರ್ಮಿಕ ಯಾತ್ರೆಯಾದ ಹಜ್ ಯಾತ್ರೆಗೆ ಮಹಿಳೆಯರು ತೆರಳುವಾಗ ಜೊತೆಗೆ ಗಂಡಸರು ಇರಲೇಬೇಕೆಂದಿಲ್ಲ. ಮುಸ್ಲೀಂ ಮಹಿಳೆಯರು ಒಂಟಿಯಾಗಿ ಹಜ್ ಯಾತ್ರೆಗೆ ತೆರಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಹೇಳಿದ್ದಾರೆ.

ಹಜ್ ಯಾತ್ರೆಗೆ ಒಂಟಿಯಾಗಿ ತೆರಳಲು ಅವಕಾಶ ಕೊಡಬೇಕೆಂದು ಕೋರಿ ನೂರಾರು ಮುಸಲ್ಮಾನ ಮಹಿಳೆಯರು ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಗಣಿಸಿ ಹಜ್ ಯಾತ್ರೆಯ ಮೇಲಿರುವ ನಿರ್ಬಂಧವನ್ನು ತೆಗೆದು ಹಾಕಿ 45 ವರ್ಷಕ್ಕೂ ಮೇಲ್ಪಟ್ಟ ಮಹಿಳೆಯರು ಗಂಡಸರ ನೆರವಿಲ್ಲದೇ ಒಬ್ಬರೇ ಹೋಗಬಹುದು ಎಂದು ಅಲ್ಪಸಂಖ್ಯಾತ ಸಚಿವಾಲಯ ತಿಳಿಸಿದೆ.

ಇದರ ಬಗ್ಗೆ ಪ್ರಧಾನಿ ಮೋದಿ ಮನ್ ಕಿ ಬಾತ್'ನಲ್ಲಿ ಮಾತನಾಡುತ್ತಾ, ಹಜ್ ಯಾತ್ರೆಯ ನಿರ್ಬಂಧವನ್ನು ಸರ್ಕಾರ ತೆಗೆದು ಹಾಕಿದ್ದು ಸಣ್ಣ ವಿಷಯವೇ ಇರಬಹುದು. ಆದರೆ ಇದು ಸಮಾಜದಲ್ಲಿ ಹೆಚ್ಚು ಪರಿಣಾಮ ಬೀರಲಿದೆ ಎಂದಿದ್ದಾರೆ. ಇಂತದ್ದೊಂದು ನಿರ್ಬಂಧವನ್ನು ಮೊದಲ ಬಾರಿ ಕೇಳಿದಾಗ, ಯಾರು ಇಂತಹ ನಿಯಮವನ್ನು ಮಾಡಿರಬಹುದು ಎಂದು ನನಗೆ ಆಶ್ಚರ್ಯವಾಗಿತ್ತು ಎಂದರು.