ಲಖನೌ, [ಮೇ.25]: ಮೊನ್ನೇ ಅಷ್ಟೇ [ಮೇ.23] 17ನೇ ಲೋಕಸಭೆಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಎನ್ ಡಿಎ ಮೈತ್ರಿಕೂಟ ಒಟ್ಟು 542 ಲೋಕಸಭಾ ಕ್ಷೇತ್ರಗಳಲ್ಲಿ ಬರೋಬ್ಬರಿ 353 ಕ್ಷೇತ್ರಗಳ ವಿಜಯ ಪತಾಕೆ ಹಾರಿಸಿದೆ.

ಭರ್ಜರಿ ಜಯಬೇರಿ ಬಾರಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರೆ,  ಇತ್ತ ಉತ್ತರ ಪ್ರದೇಶದ ಗೊಂಡಾದಲ್ಲಿ ಮುಸ್ಲಿಂ ಕುಟುಂಬವೊಂದು ಲೋಕಸಭಾ ರಿಸಲ್ಟ್ ದಿನದಂದೇ ಜನಿಸಿದ ಮಗುವಿಗೆ ನರೇಂದ್ರ ಮೋದಿ ಎಂದು ಹೆಸರಿಟ್ಟಿದೆ.

ಹೌದು..ಆಶ್ಚರ್ಯ ಎನಿಸಿದ್ರೂ ಇದು ಸತ್ಯ. ಮೇ.23 ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಪ್ರಚಂಡ ಜಯಭೇರಿ ಬಾರಿಸಿತು. 

ಅದೇ ದಿನದಂದು ಗಂಡು ಮಗು ಜನಿಸಿದ ಹಿನ್ನೆಲೆಯಲ್ಲಿ ಆ ಮಗುವಿಗೆ ನರೇಂದ್ರ ಮೋದಿ ಎಂದು ನಾಮಕರಣ ಮಾಡಲಾಗಿದೆ. ಈ ಬಗ್ಗೆ ದುಬೈಯಲ್ಲಿರುವ ಅವರ ತಂದೆಗೆ  ಫೋನ್ ಮಾಡಿ ನರೇಂದ್ರ ಮೋದಿ ಎಂದು ಹೆಸರು ಇಡಲಾಗಿದೆ ಎಂದು ಮಗುವಿನ ತಾತ ಮೊಹಮ್ಮದ್ ಇದ್ರೀಸ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.