ಜಾನ್ಹವಿ 'ಧಡಕ್' ಫೋಟೋ ಪೊಲೀಸ್ ಇಲಾಖೆ 'ಖಡಕ್' ಬಳಕೆಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಅಭಿನಯದ ಚಿತ್ರಚಿತ್ರದ ದೃಶ್ಯವೊಂದರ ಫೋಟೋ ಬಳಸಿಕೊಂಡ ಪೊಲೀಸ್ ಇಲಾಖೆಟ್ರಾಪಿಕ್ ಜಾಗೃತಿ ಮೂಡಿಸಲು ಜಾನ್ಹವಿ ಡೈಲಾಗ್ ಬಳಕೆ

ಮುಂಬೈ(ಜೂ.22): ಬಾಲಿವುಡ್ ನಟಿ ದಿವಂಗತ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಅಭಿನಯದ 'ಧಡಕ್' ಚಿತ್ರ ಇನ್ನೂ ತೆರೆ ಮೇಲೆ ಬರಬೇಕಿದೆ. ಆದರೆ ಮುಂಬೈ ಟ್ರಾಫಿಕ್ ಪೊಲೀಸ್ ಈ ಚಿತ್ರದ ದೃಶ್ಯವೊಂದನ್ನು ಟ್ರಾಫಿಕ್ ಜಾಗೃತಿ ಮೂಡಿಸಲು ಬಳಕೆ ಮಾಡಿಕೊಂಡಿದೆ.

ಹೌದು, ಜಾನ್ಹವಿ ಅಭಿನಯದ 'ಧಡಕ್' ಚಿತ್ರದ ದೃಶ್ಯವೊಂದನ್ನು ಎಡಿಟ್ ಮಾಡಿರುವ ಮುಂಬೈ ಪೊಲೀಸ್ ಇಲಾಖೆ ಜಾನ್ಹವಿ ಮುಖದ ಮುಂದೆ ಟ್ರಾಫಿಕ್ ಸಿಗ್ನಲ್ ಫೋಟೋ ಹಾಕಿದೆ. ಚಿತ್ರದಲ್ಲಿ ಜಾನ್ಹವಿ ಹೇಳುವ ಡೈಲಾಗ್‌ನ್ನು ಫೋಟೋಗೆ ಟ್ಯಾಗ್ ಮಾಡಲಾಗಿದ್ದು, ಮುಂಬೈ ಪೊಲೀಸ್ ಅಧಿಕೃತ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿಲಾಗಿದೆ.

ಜನರಲ್ಲಿ ಟ್ರಾಫಿಕ್ ಜಾಗೃತಿ ಮೂಡಿಸಲು ಈ ರೀತಿ ಫೋಟೋ ಬಳಕೆ ಮಾಢಿಕೊಂಡಿರುವುದಾಗಿ ಇಲಾಖೆ ತಿಳಿಸಿದೆ. ಟ್ರಾಫಿಕ್ ಸಿಗ್ನಲ್‌ಗಳನ್ನು ಲೆಕ್ಕಿಸದೆ ಬೇಕಾಬಿಟ್ಟಿ ವಾಹನ ಚಲಾಯಿಸುವವರಿಗೆ ಈ ಫೋಟೋ ಪಾಠವಾದರೆ ಸಾರ್ಥಕ ಎಂದು ಇಲಾಖೆ ಟ್ವಿಟ್ ಮಾಡಿದೆ.

Scroll to load tweet…

ಇನ್ನು ಟ್ರಾಫಿಕ್ ಜಾಗೃತಿ ಮೂಡಿಸಲು ಜಾನ್ಹವಿ ಕಪೂರ್ ಫೋಟೋ ಬಳಸಿಕೊಂಡ ಮುಂಬೈ ಪೊಲೀಸ್ ಇಲಾಖೆಯ ಕ್ರಮ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಜಾನ್ಹವಿ ಅವರು ಚಿತ್ರದಲ್ಲಿ ಹೇಳುವ ಡೈಲಾಗ್ ಜನರನ್ನು ತಲುಪುವುದರಲ್ಲಿ ಸಂದೇಹವೇ ಇಲ್ಲ ಎಂಬುದು ಹಲವರ ಅಭಿಪ್ರಾಯವಾಗಿದೆ.