ಮುಂಬೈ[ಅ.16] ಸುಂದರಿ ಮಾಡೆಲ್ ಕೊಲೆಯ ರಹಸ್ಯವನ್ನು ಮುಂಬೈ ಪೊಲೀಸರು ಪತ್ತೆ ಮಾಡಿದ್ದು 20 ವರ್ಷದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.  20 ವರ್ಷದ ವಿದ್ಯಾರ್ಥಿಯೊಬ್ಬ ಮಾಡೆಲ್ ಅನ್ನು ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ತೆಗೆದುಕೊಂಡು ಹೋಗಿದ್ದ ಪ್ರಕರಣ ಆತಂಕ ಮೂಡಿಸಿತ್ತು.

20 ವರ್ಷದ ಮಾನ್ಸಿ ದೀಕ್ಷಿತ್  ಕೊಲೆಯಾಗಿದ್ದಳು. 20 ವರ್ಷದ ವಿದ್ಯಾರ್ಥಿ ಮುಜಾಮಿಲ್ ಸೈಯಿದ್ ಮಾಡೆಲ್ ಹತ್ಯೆ ಮಾಡಿ ಅಂಧೇರಿಯಿಂದ ಮಲಾಡ್ ಗೆ ಶವವನ್ನು ಸೂಟ್ ಕೇಸ್ ನಲ್ಲಿ ತೆಗೆದುಕೊಂಡು ಹೋಗಿ ಬಿಸಾಕಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ವಿಶ್ವದ ನಿಗೂಢ ಕೊಲೆ ಪ್ರಕರಣವಿದು; 130 ವರ್ಷವಾದರೂ ಸಿಕ್ಕಿಲ್ಲ ಕೊಲೆಗಾರ

ರಾಜಸ್ತಾನದ ಮಾನ್ಸಿ ದೀಕ್ಷಿತ್ ಮಾಡೆಲ್ ಆಗಬೇಕೆಂದು ಮುಂಬೈಗೆ ಬಂದಿದ್ದಳು. ಈ ಮಧ್ಯೆ ಫೇಸ್ ಬುಕ್ ನಲ್ಲಿ ಮಾನ್ಸಿ ದೀಕ್ಷಿತ್ ಹಾಗೂ ಸೈಯಿದ್ ಪರಿಚಯವಾಗಿದೆ. ಸೋಮವಾರ ಮಧ್ಯಾಹ್ನ ಅಂಧೇರಿಯಲ್ಲಿ ಸೈಯಿದ್ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿ ಭೇಟಿಯಾಗಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದು ಸೈಯಿದ್ ಕೈಗೆ ಸಿಕ್ಕ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆ.  ಗಾಯಗೊಂಡಿದ್ದ ಮಾನ್ಸಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ. ಇದರಿಂದ ಗಾಬರಿಗೊಂಡ ಸೈಯಿದ್ ಕ್ಯಾಬ್ ನಲ್ಲಿ ಅಂಧೇರಿಯಿಂದ ಮಲಾಡ್ ಗೆ ಸೂಟ್‌ಕೇಸ್‌ನಲ್ಲಿ ಶವವನ್ನು ಸಾಗಿಸಿದ್ದಾನೆ.

ನಂತರ ಮಲಾಡ್ ನ ನಿರ್ಜನ ಪ್ರದೇಶದಲ್ಲಿ ಶವ ಬಿಸಾಡಿ ಆಟೋ ರಿಕ್ಷಾದಲ್ಲಿ ಸೈಯಿದ್ ಹೊರಟಿದ್ದನ್ನು ಗಮನಿಸಿದ ಕ್ಯಾಬ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.  ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಸೂಟ್‌ಕೇಸ್‌ ತೆರೆದು ನೋಡಿದಾಗ ಮಾಡೆಲ್ ಶವ ಪತ್ತೆಯಾಗಿತ್ತು.

ತನಿಖೆ ನಡೆಸಿದ ಪೊಲೀಸರು ಮೊದಲು ವ್ಯಕ್ತಿ ಬಂದಿಳಿದ ಆಟೋ ನಂಬರ್ ಪತ್ತೆ ಮಾಡಿದ್ದಾರೆ. ಇದಾದ ಮೇಲೆ ಆಟೋ ಸಂಚರಿಸಿದ ಮಾರ್ಗದ ಸಿಸಿಟಿವಿ ಚಲನ ವಲನ ನೋಡೊದ್ದಾರೆ. ವ್ಯಕ್ತಿ ಒಂದು ಕಡೆ ಆಟೋದಿಂದ ಕ್ಯಾಬ್ ಗೆ ಶಿಫ್ಟ್ ಆಗಿದ್ದಾನೆ. ಆ ಮಾಹಿತಿಯನ್ನು ಪಡೆದುಕೊಂಡ ಪೊಲೀಸರು ಕೇವಲ 2 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.