ಮುಂಬೈ (ನ.12): ಕೇಂದ್ರ ಸರ್ಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಪರಿಣಾಮವಾಗಿ ನವಜಾತ ಶಿಶುವೊಂದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಜಗದೀಶ್ ಶರ್ಮಾ ಎನ್ನುವವರ ಪತ್ನಿಗೆ ಮನೆಯಲ್ಲಿಯೇ ಅವಧಿ ಪೂರ್ವ ಹೆರಿಗೆಯಾಗಿತ್ತು. ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಚಿಕಿತ್ಸಾ ವೆಚ್ಚವಾಗಿ 4000 ರೂಗಳನ್ನು ಕಟ್ಟಲು ವೈದ್ಯರು ಸೂಚಿಸಿದ್ದಾರೆ. ಆಗ  ಶರ್ಮಾರವರು 500 ರೂ.ರ ನೋಟುಗಳನ್ನು  ಮುಂದಾದಾಗ ಅದನ್ನು ಸ್ವೀಕರಿಸಲು ಆಸ್ಪತ್ರೆಯವರು ನಿರಾಕರಿಸಿದ್ದಾರೆ.

ಇಷ್ಟೇ ಆಗಿದಿದ್ದರೆ ಪರ್ವಾಗಿರಲಿಲ್ಲ. ಆದರೆ ವೈದ್ಯರು ಮಗುವಿಗೆ ಚಿಕಿತ್ಸೆ ನೀಡಲು ಸಹ ನಿರಾಕರಿಸಿದ್ದಾರೆ. ಎಟಿಎಂನಿಂದ ಹಣ ತರಲು ಮಗುವಿನ ತಂದೆ ಹೋದರೆ ಅದು ಕೂಡಾ ಸ್ಥಗಿತವಾಗಿತ್ತು. 

ಬೇರೆ ದಾರಿ ಕಾಣದೇ ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮಗು ಮೃತಪಟ್ಟಿದೆ. 

ಆಸ್ಪತ್ರೆ ಹಾಗೂ ವೈದ್ಯರ ಮೇಲೆ ಹತ್ತಿರದ ಪೋಲಿಸ್ ಸ್ಟೇಶನ್ ನಲ್ಲಿ ದೂರು ದಾಖಲಾಗಿದೆ.