2005ರಲ್ಲಿ  ಬಂಡಾರ್'ಕರ್ ಅವರನ್ನು ಕೊಲ್ಲಲು  ಭೂಗತ ದೊರೆ ಅರುಣ್ ಗೌಳಿಯ ಸಹಚರರಾದ ನರೇಶ್ ಪರದೇಶಿ ಹಾಗೂ ಶಿವರಾಮ್ ದಾಸ್ ಎಂಬುವವರಿಗೆ 75 ಸಾವಿರ ರೂ.ಗೆ ಸುಪಾರಿ ನೀಡಿದ್ದಳು. ಸುಪಾರಿ ಕೊಲೆಗಾರರಿಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಮುಂಬೈ(ಏ.28): ಬಾಲಿವುಡ್ ಸಿನಿಮಾ ನಿರ್ದೇಶಕ ಮಧೂರ್ ಬಂಡಾರ್'ಕರ್ ಅವರನ್ನು ಕೊಲ್ಲಲು ಭೂಗತದೊರೆಯ ಸಹಚರರಿಗೆ ಸುಫಾರಿ ನೀಡಿದ್ದ ಅಪರಾಧಕ್ಕಾಗಿ ಮುಂಬೈ ಮೂಲದ ಮಾಡೆಲ್ ಪ್ರೀತಿ ಜೈನ್ ಎಂಬುವವಳಿಗೆ ಸ್ಥಳೀಯ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

ಅನಿರೀಕ್ಷಿತ ಬೆಳವಣಿಗೆಯಂಬಂತೆ ಮಾಡೆಲ್ ಜಾಮೀನು ದೊರೆತಿದ್ದು, ಶಿಕ್ಷೆ 4 ವಾರಗಳ ಕಾಲ ಮುಂದೂಡಲ್ಪಟ್ಟಿದೆ. ಪ್ರೀತಿ ಜೈನ್ 2005ರಲ್ಲಿ ಬಂಡಾರ್'ಕರ್ ಅವರನ್ನು ಕೊಲ್ಲಲು ಭೂಗತ ದೊರೆ ಅರುಣ್ ಗೌಳಿಯ ಸಹಚರರಾದ ನರೇಶ್ ಪರದೇಶಿ ಹಾಗೂ ಶಿವರಾಮ್ ದಾಸ್ ಎಂಬುವವರಿಗೆ 75 ಸಾವಿರ ರೂ.ಗೆ ಸುಪಾರಿ ನೀಡಿದ್ದಳು. ಸುಪಾರಿ ಕೊಲೆಗಾರರಿಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಒಂದು ವರ್ಷದ ನಂತರ ಅದೇ ನಿರ್ದೇಶಕನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದಳು. ಸುಪಾರಿಗಾರರು ತಮ್ಮ ಕೆಲಸ ಮಾಡದ ಕಾರಣ ಅರುಣ್ ಗೌಳಿಯಿಂದ ಹಣ ವಾಪಸ್ ಸಹ ಕೇಳಿದ್ದಳು. ನಂತರ ಆತನೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಬಾಲಿವುಡ್ ಖ್ಯಾತ ನಿರ್ದೇಶಕರಾದ ಮಧೂರ್ ಬಂಡಾರ್'ಕರ್ ಪೇಜ್ 3, ಚಾಂದಿನಿ ಬಾರ್, ಟ್ರಾಫಿಕ್ ಸಿಗ್ನಲ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.