Asianet Suvarna News Asianet Suvarna News

OMG!: 1 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ!

ಬರೋಬ್ಬರಿ 1 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ| ಹೊಸ ವರ್ಷಾಚರಣೆಗೂ ಮುನ್ನ ಪೊಲೀಸರ ಭರ್ಜರಿ ಬೇಟೆ| ಮುಂಬೈ ಪೊಲೀಸರಿಂದ ನಾಲ್ವರು ಖದೀಮರ ಬಂಧನ| ಬಂಧಿತರಿಂದ 100 ಕೆಜಿ ಫೆಂಟನಿಲ್ ಹೆಸರಿನ ಡ್ರಗ್ಸ್ ವಶ|ಮೆಕ್ಸಿಕೋಗೆ ಸಾಗಿಸಲು ಪ್ಲ್ಯಾನ್ ಮಾಡಿದ್ದ ಖದೀಮರು

Mumbai Cops Seizes Drug Worth Rs 1000 Crore
Author
Bengaluru, First Published Dec 28, 2018, 9:26 PM IST

ಮುಂಬೈ(ಡಿ.28): ಹೊಸ ವರ್ಷ ಆಚರಣೆಗೂ ಮುನ್ನ ಮುಂಬೈ ಪೊಲೀಸರಿಗೆ ಭರ್ಜರಿ ಬೇಟೆ ಸಿಕ್ಕಿದೆ. ಬರೋಬ್ಬರಿ 1 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ. 

ಅಪಾರ ಪ್ರಮಾಣದ ನಿಷೇಧಿತ ಡ್ರಗ್ಸ್ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದು, ಬಂಧಿತರಿಂದ 1,000 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿರುವುದಾಗಿ ಮುಂಬೈ ಕ್ರೈಂ ಬ್ರಾಂಚ್‌ನ ಆಂಟಿ-ನಾರ್ಕೋಟಿಕ್ಸ್ ಸೆಲ್ ಡಿಸಿಪಿ ಶಿವದೀಪ್ ತಿಳಿಸಿದ್ದಾರೆ.

ಸುಮಾರು 100 ಕೆಜಿ ಫೆಂಟನಿಲ್ ಹೆಸರಿನ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಡ್ರಗ್ಸ್ ಗಳ ಮೌಲ್ಯ 1 ಸಾವಿರ ಕೋಟಿ ರೂ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಈ ಡ್ರಗ್ಸ್ ಅನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಬಂಧಿತ ಆರೋಪಿಗಳು ಮಾಹಿತಿ ನೀಡಿದ್ದು, ಇದನ್ನು ಮೆಕ್ಸಿಕೋಗೆ ಕಳುಹಿಸಲು ಖದೀಮರು ಮುಂದಾಗಿದ್ದರು ಎನ್ನಲಾಗಿದೆ.
 

Follow Us:
Download App:
  • android
  • ios