ದೇಶದ ಉನ್ನತ ಕಾನೂನು ಅಧಿಕಾರಿ ಹುದ್ದೆಗೆ ಎರಡನೇ ಅವಧಿಗೆ ಮುಂದುವರಿಯಲು ತಮಗೆ ಆಸಕ್ತಿಯಿಲ್ಲ ಎಂಬುದಾಗಿ ಸರ್ಕಾರಕ್ಕೆ ಕಳೆದ ತಿಂಗಳೇ ಪತ್ರ ಬರೆದಿದ್ದೇನೆ ಎಂದು ರೋಹಟಗಿ ಹೇಳಿದ್ದಾರೆ.

ನವದೆಹಲಿ: ಮೂರು ವರ್ಷಗಳು ಪೂರ್ಣಗೊಂಡಿರುವುದರಿಂದ ತಮ್ಮನ್ನು ಅಟಾರ್ನಿ ಜನರಲ್‌ ಹುದ್ದೆ ಯಿಂದ ಕೈಬಿಡುವಂತೆ ಮುಕುಲ್‌ ರೋಹಟಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶದ ಉನ್ನತ ಕಾನೂನು ಅಧಿಕಾರಿ ಹುದ್ದೆಗೆ ಎರಡನೇ ಅವಧಿಗೆ ಮುಂದುವರಿಯಲು ತಮಗೆ ಆಸಕ್ತಿಯಿಲ್ಲ ಎಂಬುದಾಗಿ ಸರ್ಕಾರಕ್ಕೆ ಕಳೆದ ತಿಂಗಳೇ ಪತ್ರ ಬರೆದಿದ್ದೇನೆ ಎಂದು ರೋಹಟಗಿ ಹೇಳಿದ್ದಾರೆ.

ಖಾಸಗಿ ಕಾನೂನು ಸೇವೆಗೆ ಮರಳಲು ಬಯಸಿರುವುದಾಗಿ ಅವರು ತಿಳಿಸಿದ್ದಾರೆ. ಅವರ ಈ ದಿಢೀರ್‌ ನಿರ್ಧಾರ ಸರ್ಕಾರಕ್ಕೆ ಆಘಾತ ತಂದಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರೋಹಟಗಿ ಅವರನ್ನು ಅಟಾರ್ನಿ ಜನರಲ್‌ ಆಗಿ ನೇಮಕಗೊಳಿಸಲಾಗಿತ್ತು. ಇವರ ಸ್ಥಾನಕ್ಕೆ ಖ್ಯಾತ ವಕೀಲ ಹರೀಶ್‌ ಸಾಳ್ವೆ ಮತ್ತು ಸಾಲಿಸಿಟರ್‌ ಜನರಲ್‌ ರಂಜಿತ್‌ ಕುಮಾರ್‌ ಅವರ ಹೆಸರು ಚಾಲ್ತಿಯಲ್ಲಿದೆ.