ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆಯಾದರೆ  ಸಾಕು ಆಯಾ ಕ್ಷೇತ್ರದ ಶಾಸಕರು, ಅವರ ಬೆಂಬಲಿಗರು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಸರ್ಕಾರದಲ್ಲಿ ಸಚಿವ ಸಂಪುಟ ಸೇರ್ಪಡೆಗೆ ಕಸರತ್ತು ನಡೆಸುವುದು ಕಾಮನ್​ ಆದರೆ ಇಲ್ಲೊಂದು ಕ್ಷೇತ್ರವಿದೆ, ಈ ಕ್ಷೇತ್ರದಲ್ಲಿ ಯಾರೇ ಆಯ್ಕೆಯಾಗಿ ಬಂದರೂ ಅವರಿಗೆ ಮಂತ್ರಿಗಿರಿ ಮಾತ್ರ ತಪ್ಪೋದಿಲ್ಲ.

ಬೀದರ್(ಸೆ.1): ಕಳೆದ 2 ದಶಕಗಳಿಂದ ಅದೃಷ್ಟದ ಮುಧೋಳಕ್ಕೆ ನಿಲ್ಲದ ಮಂತ್ರಿ ಭಾಗ್ಯ. ಈಗಲೂ ತಪ್ಪಲಿಲ್ಲ ಮುಧೋಳಕ್ಕೆ ಸಚಿವ ಸ್ಥಾನ. ರಾಜ್ಯದಲ್ಲಿ ಬಿಜೆಪಿ ಬರಲಿ, ಕಾಂಗ್ರೆಸ್​ ಬರಲಿ ಯಾರೇ ಅಧಿಕಾರಕ್ಕೆ ಬಂದರೂ ಈ ಕ್ಷೇತ್ರಕ್ಕೆ ಸಚಿವ ಸ್ಥಾನ ಫಿಕ್ಸ್​. ತಿಮ್ಮಾಪೂರ ಸಂಪುಟ ಸೇರ್ಪಡೆ ಬೆನ್ನಲ್ಲೆ ಮತ್ತೆ ಅಜರಾಮರವಾಗಿ ಉಳಿಯಿತು ಮುಧೋಳ ಮತಕ್ಷೇತ್ರದ ಇತಿಹಾಸ.

ಬಾಗಲಕೋಟೆ ಜಿಲ್ಲೆಯ ಮೀಸಲು ಕ್ಷೇತ್ರವಾಗಿರೋ ಮುಧೋಳ ವಿಧಾನಸಭಾ ಮತಕ್ಷೇತ್ರ. 3 ಬಾರಿ ಸೋತರೂ ವಿಧಾನ ಪರಿಷತ್ ಸ್ಥಾನದಲ್ಲಿ ಆಯ್ಕೆಯಾಗಿ ಸಚಿವರಾದ ಆರ್.ಬಿ.ತಿಮ್ಮಾಪೂರ. ಈ ಹಿಂದಿನ 2 ಬಾರಿ ಗೆದ್ದು ಈ ಕ್ಷೇತ್ರದಲ್ಲಿ ಸಚಿವರಾಗಿದ್ದ ಬಿಜೆಪಿಯ ಗೋವಿಂದ ಕಾರಜೋಳ.

ಆ ಕ್ಷೇತ್ರದ ಜನರ ಅದೃಷ್ಟವೋ ಅಥವಾ ಆ ಕ್ಷೇತ್ರದ ಜನಪ್ರತಿನಿಧಿಗಳ ಭಾಗ್ಯವೋ ಗೊತ್ತಿಲ್ಲ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಈ ಕ್ಷೇತ್ರಕ್ಕೆ ಮಾತ್ರ ಮಂತ್ರಿಭಾಗ್ಯ ತಪ್ಪೋದಿಲ್ಲ. ಆದರೆ ಈ ಬಾರಿ ಈ ಕ್ಷೇತ್ರದ ಜನತೆಗೆ ಅದೃಷ್ಟ ಕೈ ಕೊಟ್ಟಿತು ಅನ್ನುವಷ್ಟರಲ್ಲಿ ಸಿಎಂ ಸಿದ್ದರಾಮಯ್ಯನವರ ಸಚಿವ ಸಂಪುಟಕ್ಕೆ ತಿಮ್ಮಾಪೂರ ಅವರನ್ನು ಸೇರ್ಪಡೆಯಾಗಿಸುವುದರ ಮೂಲಕ ಕಳೆದ 2 ದಶಕಗಳ ಇತಿಹಾಸ ಮತ್ತೆ ಮುಂದುವರಿಸಿದ್ದಾರೆ.

ಇಬ್ಬರು ಮಂತ್ರಿಗಳು

ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆಯಾದರೆ ಸಾಕು ಆಯಾ ಕ್ಷೇತ್ರದ ಶಾಸಕರು, ಅವರ ಬೆಂಬಲಿಗರು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಸರ್ಕಾರದಲ್ಲಿ ಸಚಿವ ಸಂಪುಟ ಸೇರ್ಪಡೆಗೆ ಕಸರತ್ತು ನಡೆಸುವುದು ಕಾಮನ್​ ಆದರೆ ಇಲ್ಲೊಂದು ಕ್ಷೇತ್ರವಿದೆ, ಈ ಕ್ಷೇತ್ರದಲ್ಲಿ ಯಾರೇ ಆಯ್ಕೆಯಾಗಿ ಬಂದರೂ ಅವರಿಗೆ ಮಂತ್ರಿಗಿರಿ ಮಾತ್ರ ತಪ್ಪೋದಿಲ್ಲ. ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನ ಸಭಾ ಮತಕ್ಷೇತ್ರ. ಮೀಸಲು ವಿಧಾನಸಭಾ ಮತಕ್ಷೇತ್ರವಾಗಿರೋ ಮುಧೋಳಕ್ಕೆ ಕಳೆದ 2 ದಶಕಗಳಿಂದಈ ಕ್ಷೇತ್ರದ ಜನಪ್ರತಿನಿಧಿಗಳಿಗೆ ಆಯಾ ಸರ್ಕಾರದಲ್ಲಿ ಮಂತ್ರಿಗಿರಿ ಭಾಗ್ಯ ಮಾತ್ರ ತಪ್ಪಿಲ್ಲ.

ಬಿಜೆಪಿಯಿಂದ ಗೋವಿಂದ ಕಾರಜೋಳ ಸಚಿವರಾಗುತ್ತ ಬಂದಿದ್ದರೆ, ಇತ್ತ ಕಾಂಗ್ರೆಸ್​ನಿಂದ ಆರ್.ಬಿ.ತಿಮ್ಮಾಪೂರ ಮಂತ್ರಿಭಾಗ್ಯ ಅನುಭವಿಸುತ್ತಿದ್ದಾರೆ. ಮೊದಲು ತಿಮ್ಮಾಪೂರ ಮಂತ್ರಿಯಾಗಿದ್ದರೆ ನಂತರ ಕಳೆದ ಅವಧಿಗೆ ಕಾರಜೋಳ ಆಯ್ಕೆಯಾಗಿ ಮಂತ್ರಿಯಾಗಿದ್ದರು. ಈ ಬಾರಿ ಕಾರಜೋಳ ಆಯ್ಕೆಯಾಗಿದ್ದರೂ ಸರ್ಕಾರ ಕಾಂಗ್ರೆಸ್​ ಆಗಿದ್ದರಿಂದ ಮಂತ್ರಿ ಪದವಿ ತಪ್ಪಿತ್ತು. ಆದರೆ ಮರಳಿ ಆರ್.ಬಿ.ತಿಮ್ಮಾಪೂರ ವಿಧಾನಪರಿಷತ್​ಗೆ ಆಯ್ಕೆಯಾಗಿ ಮತ್ತೇ ಸಿದ್ದರಾಮಯ್ಯನವರ ಸಂಪುಟಕ್ಕೆ ಸೇರ್ಪಡೆಯಾಗಿದ್ದರಿಂದ ಮುಧೋಳದ ಇತಿಹಾಸ ಮುಂದುವರೆದಂತಾಗಿದೆ.

ವರದಿ: ಮಲ್ಲಿಕಾರ್ಜುನ ಹೊಸಮನಿ