ಟೀಂ ಇಂಡಿಯಾದ ನಾಯಕತ್ವಕ್ಕೆ ಧೋನಿ ರಾಜೀನಾಮೆ ಕೊಟ್ಟ ಮೇಲೆ ಮತ್ತಷ್ಟು ಕೂಲ್‌ ಆಗಿದ್ದಾರೆ. ಮಗಳು ಜೀವಾ ಜೊತೆ ಧೋನಿ ತಾವೂ ಮಗುವಾಗಿ ಕಾಲ ಕಳೆಯುತ್ತಿದ್ದಾರೆ.

ರಾಂಚಿ (ಫೆ.16): ಮೈದಾನದಲ್ಲಿ ಕೂಲ್‌ ಕ್ರಿಕೆಟರ್‌ ಎಂದು ಹೆಸರು ಮಾಡಿರುವ ಮಹೇಂದ್ರ ಸಿಂಗ್‌ ಧೋನಿ, ಮನೆಯಲ್ಲೂ ಕೂಲ್‌ ಕೂಲ್‌ ಆಗಿದ್ದಾರೆ.

ಟೀಂ ಇಂಡಿಯಾದ ನಾಯಕತ್ವಕ್ಕೆ ಧೋನಿ ರಾಜೀನಾಮೆ ಕೊಟ್ಟ ಮೇಲೆ ಮತ್ತಷ್ಟು ಕೂಲ್‌ ಆಗಿದ್ದಾರೆ. ಮಗಳು ಜೀವಾ ಜೊತೆ ಧೋನಿ ತಾವೂ ಮಗುವಾಗಿ ಕಾಲ ಕಳೆಯುತ್ತಿದ್ದಾರೆ.

ಧೋನಿ ಹುಲ್ಲು ಹಾಸಿನ ಮೇಲೆ ಮಗಳ ಹಿಂದೆ ತಾವು ಕೂಡ ತೆವಳುತ್ತಾ ಸಖತ್‌ ಏಂಜಾಯ್‌ ಮಾಡಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ