ಕೋಲ್ಕತ್ತಾ[ಸೆ.21]: ನುಸ್ರತ್ ಜಹಾನ್ ಹಾಗೂ ಮಿಮಿ ಚಕ್ರವರ್ತಿಯ ನೃತ್ಯದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದೇ ಮೊದಲ ಬಾರಿ ಟಿಎಂಸಿ ಪಕ್ಷದಿಂದ ಸಂಸದೆಯರಾಗಿ ಆಯ್ಕೆಯಾದ ಈ ಇಬ್ಬರು ಸಿನಿ ನಟಿಯರು ವಿಡಿಯೋದಲ್ಲಿ ಒಟ್ಟಾಗಿ ಕಂಡು ಬಂದಿದ್ದಾರೆ. 

ದುರ್ಗಾ ಪೂಜೆಯ ವಿಡಿಯೋ ಇದಾಗಿದ್ದು, ಇಬ್ಬರೂ ಸಂಸದೆಯರು ಮಾತೆ ದುರ್ಗೆಯನ್ನು ಆರಾಧಿಸಿ ನೃತ್ಯ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವ ದುರ್ಗಾ ಪೂಜೆ 4 ಅಕ್ಟೋಬರ್ ನಿಂದ 8ರವರೆಗೆ ನಡೆಯಲಿದೆ.

ನುಸ್ರತ್ ಬಂಗಾಳಿ ನಟಿ. 2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಬಶೀರ್‌ಹಾಟ ಕ್ಷೇತ್ರದಿಂದ ಕಣಕ್ಕಿಳಿದಿದ್ದ ನುಸ್ರತ್ ಸುಮಾರು 3.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇತ್ತ ಮಿಮಿ ಚಕ್ರವರ್ತಿ ಕೂಡಾ ಓರ್ವ ಬಂಗಾಳಿ ನಟಿ. ಇವರು ಜಾಧವ ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.