ಬೆಂಗಳೂರಿನ ಕೆರೆ ಉಳಿಸುವಂತೆ NGT ಆದೇಶ ಹೊರಡಿಸಿದ ಬೆನ್ನಲ್ಲೇ ರಾಜ್ಯಸಭಾ ಸದಸ್ಯ ರಾಜೀವ್​ ಚಂದ್ರಶೇಖರ್​ ಬೆಳ್ಳಂದೂರು ಕೆರೆಗೆ ಭೇಟಿ ನೀಡಿದ್ದರು.

ಬೆಂಗಳೂರು(ಎ.28): ಬೆಂಗಳೂರಿನ ಕೆರೆ ಉಳಿಸುವಂತೆ NGT ಆದೇಶ ಹೊರಡಿಸಿದ ಬೆನ್ನಲ್ಲೇ ರಾಜ್ಯಸಭಾ ಸದಸ್ಯ ರಾಜೀವ್​ ಚಂದ್ರಶೇಖರ್​ ಬೆಳ್ಳಂದೂರು ಕೆರೆಗೆ ಭೇಟಿ ನೀಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಂದೂರು, ವರ್ತೂರು ಮತ್ತು ರಾಂಪುರ ಕೆರೆಗಳಿಗೆ ಸಂಸದರು ಭೇಟಿ ನೀಡಿದ್ದರು. ಭವಿಷ್ಯದ ದೃಷ್ಟಿಯಿಂದ ಪ್ರಾಚೀನ ಬೆಂಗಳೂರನ್ನು ಮುಂದಿನ ಪೀಳಿಗೆಗೆ ಉಳಿಸಲು ಕೆರೆ ಉಳಿಸಿ ಅಭಿಯಾನದ ಮೂಲದ ರಾಜ್ಯಸಭಾ ಸದಸ್ಯ ರಾಜೀವ್​ ಚಂದ್ರಶೇಖರ್ ಕೆರೆ ಉಳಿವಿಗೆ ಪಣ ತೊಟ್ಟಿದ್ದಾರೆ. ಸಂಸದ ಪಿ.ಸಿ ಮೋಹನ್​, ಮಾಜಿ ಶಾಸಕ ಅರವಿಂದ ಲಿಂಬಾವಳಿ ಹಾಗೂ ಬೆಂಗಳೂರು ನಾಗರಿಕ ವೇದಿಕೆ ಸದಸ್ಯರು ಈ ವೇಳೆ ಹಾಜರಿದ್ದರು.

ಈ ವೇಳೆ ಕೆರೆಯಲ್ಲಿ ಈಗಲೂ ಕೂಡಾ ರಾಸಾಯನಿಕ ನೀರು, ತ್ಯಾಜ್ಯ ಹಾಕಲಾಗುತ್ತಿದೆ. ಆದರೆ ಅಧಿಕಾರಿಗಳು ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಅಂತ ಸ್ಥಳೀಯರು ಸಂಸದರ ಮುಂದೆ ಅಳಲು ತೋಡಿಕೊಂಡರು.