ಸಂವಿಧಾನವನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಮರೆತು ನೀವು ನೇರವಾಗಿ ಗಲಭೆಗೆ ಪ್ರಚೋದನೆ ನೀಡಿ ನಿಮ್ಮ ಕರ್ತವ್ಯವನ್ನು ಉಲ್ಲಂಘಿಸುತ್ತಿದ್ದೀರಿ ’ ಎಂದು ಟ್ವಿಟರ್'ನಲ್ಲಿ ಕಿಡಿಕಾರಿದ್ದಾರೆ.
ಬೆಂಗಳೂರು[ಸೆ.20]: ರಾಜ್ಯದ ಜನರನ್ನು ದಂಗೆಯೇಳಿಸುವುದು ನಮಗೆ ಗೊತ್ತು ಎಂಬ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಮಾನ್ಯ ಹೆಚ್. ಡಿ. ಕುಮಾರ ಸ್ವಾಮಿ ಅವರೆ, ಕರ್ನಾಟಕದ ಮುಖ್ಯಮಂತ್ರಿಯಾಗಿ ನೀವು ಕರ್ನಾಟಕದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಸಂವಿಧಾನವನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಮರೆತು ನೀವು ನೇರವಾಗಿ ಗಲಭೆಗೆ ಪ್ರಚೋದನೆ ನೀಡಿ ನಿಮ್ಮ ಕರ್ತವ್ಯವನ್ನು ಉಲ್ಲಂಘಿಸುತ್ತಿದ್ದೀರಿ ’ ಎಂದು ಟ್ವಿಟರ್'ನಲ್ಲಿ ಕಿಡಿಕಾರಿದ್ದಾರೆ.
ಬಿಜೆಪಿ ನಾಳೆ ಧರಣಿ
ಸಿಎಂ ದಂಗೆ ಹೇಳಿಕೆ ವಿರೋಧಿಸಿ ನಾಳೆ ಬಿಜೆಪಿ ಯುವ ಮೋರ್ಚಾ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದೆ. ರಾಜ್ಯ ಬಿಜೆಪಿ ನಾಯಕರು ಈ ಹೇಳಿಕೆಯ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಲು ಚಿಂತನೆ ನಡೆಸಿದ್ದಾರೆ.
