ಜಮ್ಮು ಕಾಶ್ಮೀರದಲ್ಲಿ ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರ ದಾಳಿ ಬಗ್ಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. 7 ಜನ ಯಾತ್ರಾರ್ಥಿಗಳನ್ನು ಕೊಂದ ಉಗ್ರರ ಅಟ್ಟಹಾಸದ ಬಗ್ಗೆ ಖಂಡನೆ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ದಾಳಿ ಬಗ್ಗೆ ಮಾಹಿತಿ ಇದ್ದರೂ ನಿರ್ಲಕ್ಷ್ಯ ತೋರಿದ್ದ ಗುಪ್ತಚರ ಇಲಾಖೆ ಬಗ್ಗೆ ಟೀಕೆಗಳ ಸುರಿಮಳೆ ಕೇಳಿಬರ್ತಿದೆ.
ನವದೆಹಲಿ (ಜು.13): ಅಮರ್'ನಾಥ್ ಯಾತ್ರಾರ್ಥಿಗಳ ಮೇಲೆ ದಾಳಿ ನಡೆದೂ ಇಂದಿಗೆ 3 ದಿನ. ಭಾರೀ ಭದ್ರತಾ ಬಂದೋಬಸ್ತಿನ ನಡುವೆಯೂ ಭಯೋತ್ಪಾದಕರು ಪೈಶಾಚಿಕ ಕೃತ್ಯವೆಸಗಿದ್ದರು.ಇನ್ನು ಇದೇ ವೇಳೆ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪಾಕ್'ಅನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವಂತೆ ಆಗ್ರಹಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರ ದಾಳಿ ಬಗ್ಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. 7 ಜನ ಯಾತ್ರಾರ್ಥಿಗಳನ್ನು ಕೊಂದ ಉಗ್ರರ ಅಟ್ಟಹಾಸದ ಬಗ್ಗೆ ಖಂಡನೆ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ದಾಳಿ ಬಗ್ಗೆ ಮಾಹಿತಿ ಇದ್ದರೂ ನಿರ್ಲಕ್ಷ್ಯ ತೋರಿದ್ದ ಗುಪ್ತಚರ ಇಲಾಖೆ ಬಗ್ಗೆ ಟೀಕೆಗಳ ಸುರಿಮಳೆ ಕೇಳಿಬರ್ತಿದೆ.
ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪಾಕ್'ಅನ್ನು ಉಗ್ರ ರಾಷ್ಟ್ರ ಎಂದು ಘೋಷಿಸವಂತೆ ಮತ್ತೊಮ್ಮೆ ರಾಜ್ಯಸಭೆಯಲ್ಲಿ ಒತ್ತಾಯಿಸುವುದಾಗಿ ತಿಳಿಸಿದ್ದು, ಟ್ವೀಟ್ ಕೂಡ ಮಾಡಿದ್ದಾರೆ.ಒಟ್ಟಾರೆ ರಾಜ್ಯಸಭೆಯಲ್ಲಿ ರಾಜೀವ್ ಘೋಷಿಸುವ ವಾಕ್ಯ ಎಷ್ಟರ ಮಟ್ಟಿಗೆ ಸಿಡಿಯುತ್ತೋ ಕಾದು ನೋಡ ಬೇಕಿದೆ.