ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಕ್ಕಳ ಜತೆ ಕ್ರಿಕೆಟ್ ಆಡಿ ಸಂಭ್ರಮಿಸಿದರು. ಹೆಲಿಕ್ಯಾಪ್ಟರ್ ಟೇಕ್-ಆಫ್ ಆಗದ ಹಿನ್ನಲೆಯಲ್ಲಿ ಬಿಡುವಿನ ಸಮಯದಲ್ಲಿ ರಾಹುಲ್ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ನವದೆಹಲಿ[ಅ.19]: ಹವಮಾನ ವೈಪರಿತ್ಯದಿಂದ ಹೆಲಿಕ್ಯಾಪ್ಟನ್ ಟೇಕ್ ಆಫ್’ಗೆ ಅಡಚಣೆಯಾದ್ದರಿಂದ ಸಂಸದ ರಾಹುಲ್ ಗಾಂಧಿ ಕೆಲಕಾಲ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಕಾಲ ಕಳೆದರು.

ಕಾಂಗ್ರೆಸ್ ಪ್ರಣಾಳಿಕೆ ಕದ್ದೊಯ್ಯಿರಿ: ಪ್ರಧಾನಿ ಮೋದಿಗೆ ರಾಹುಲ್ ಆಮಂತ್ರಣ!

ಹರ್ಯಾಣದ ಮಹೇಂದ್ರಘಢದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ರೆವಾರಿ ಎಂಬಲಿಂದ ತೆರಳಬೇಕಿತ್ತು. ಹವಾಮಾನ ಕೈಕೊಟ್ಟಿದ್ದರಿಂದ ರಾಹುಲ್ ಗಾಂಧಿ ಅಲ್ಲೇ ಕೆಲಕಾಲ ಉಳಿಯಬೇಕಾಯಿತು. ಈ ವೇಳೆ ಮಕ್ಕಳ ಜತೆ ಕ್ರಿಕೆಟ್ ಆಡಿ ಸಂಭ್ರಮಿಸಿದರು. 

ಚಾಮುಂಡೇಶ್ವರಿ ಸೋಲು: ‌ಚುನಾವಣೆಯಲ್ಲಿ ನಾಯಕರ ಸುಳ್ಳು ಮಾಹಿತಿ ಬಿಚ್ಚಿಟ್ಟ ಸಿದ್ದು

ಈ ಬಗ್ಗೆ ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿಯವರು ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ಆ ಬಳಿಕ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕ್ಯಾಪ್ಟನ್ ಟೇಕ್ ಆಫ್ ಆಗಲಿಲ್ಲ. ಈ ವೇಳೆ ರೆವಾರಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿದರು ಎಂದು ಟ್ವೀಟ್ ಮಾಡಿದೆ. 

Scroll to load tweet…

ರಾಹುಲ್ ಚೆನ್ನಾಗಿಯೇ ಬ್ಯಾಟ್ ಬೀಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Scroll to load tweet…
Scroll to load tweet…
Scroll to load tweet…