ಮೈಸೂರು, [ಅ.19]: ವಿರೋಧ ಪಕ್ಷದ ನಾಯಕರಾಗಿ ಮೊದಲ ಬಾರಿಗೆ ಇಂದು [ಶನಿವಾರ] ಮೈಸೂರಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು. 

ಇದೇ ವೇಳೆ ಸಿದ್ದರಾಂಯ್ಯ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಸೋಲನ್ನು ಮತ್ತೊಮ್ಮೆ ನೆನಪಿಸಿಕೊಂಡರು. ನಾನು ಅಲ್ಲಿ 35 ಸಾವಿರ ಮತದಿಂದ ಸೋತಿದ್ದೀನಿ. ಎಲ್ಲರು ಬಂದು ನೀವು ಗೆಲ್ತೀರಿ ಬಿಡಣ್ಣ ಅಂತಿದ್ರು. ನಮ್ಮವರಿಗೆ ಸುಳ್ಳು ಹೇಳೊಕ್ಕೆ ಬರೋಲ್ಲ ಎಂದು ಹೇಳಿದರು.

ಸಿದ್ದು-ರವಿ ಟ್ವಿಟ್ ವಾರ್, ಕೈ ಪ್ರಣಾಳಿಕೆ ಕದ್ದೊಯ್ಯಲು ಮೋದಿಗೆ ಮನವಿ: ಅ.19ರ ಟಾಪ್ 10 ಸುದ್ದಿ!

ನನಗೆ  ಕಾರ್ಯಕರ್ತರು ಬೂತ್ ಮಟ್ಟದ ಮಾಹಿತಿ ತಂದು ನೀವು ಗೆಲ್ಲುತ್ತೀರಿ ಎಂದು ಹೇಳಿದ್ರು. ಅದ್ಯಾಕೆ ನನಗೆ ಸುಳ್ಳು ಹೇಳಿದ್ರೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನಗೆ ಮೊದಲ ಚುನಾವಣೆಯಲ್ಲಿ ದುಡ್ಡು ಇರ್ಲಿಲ್ಲ. ಜನ ವಿಳ್ಯೆದೆಲೆಯಲ್ಲಿ ಇಟ್ಟ ಹಣದಿಂದ ಗೆದ್ದೆ. ಈಗ ದುಡ್ಡಿಂದ ಚುನಾವಣೆ ಗೆಲ್ಲಲು ಆಗೋಲ್ಲ. ಮೊನ್ನೆ ಸುಮಲತಾ ಮಂಡ್ಯದಲ್ಲಿ ಗೆದ್ದಿದ್ದು ದುಡ್ಡಿಂದ ಅಲ್ಲ. ಜನ ತೀರ್ಮಾನ ಮಾಡಿದ್ರೆ ಯಾವ ದುಡ್ಡು ಏನೂ ಮಾಡೋಕೆ ಆಗಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ದಳಪತಿಗಳಿಗೆ ಟಾಂಗ್ ಕೊಟ್ಟರು.

ನಾವು ತಪ್ಪು ಮಾಡಿದ್ವಿ ಅಂತ ಜನ ಮಾತಾಡ್ತಿದ್ದಾರೆ ಎಂದು ಹೇಳುವ ಮೂಲಕ ಜೆಡಿಎಸ್ ಜತೆಗಿನ ಮೈತ್ರಿ ಮಾಡಿಕೊಂಡಿದ್ದು ತಪ್ಪಾಗಿದೆ ಎಂದು ಒಪ್ಪಿಕೊಂಡರು. 2018ರ ವಿಧಾನಸಭಾ ಚುನಾವಣೆಯಲ್ಲಿ  ಸಿದ್ದರಾಮಯ್ಯ ಅವರು ಜೆಡಿಎಸ್‌ನ ಜಿ.ಟಿ.ದೇವೇಗೌಡ ವಿರುದ್ಧ ಸೋಲುಕಂಡಿದ್ದರು. ಆದ್ರೆ ಬಾದಾಮಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.