ತುಮಕೂರು [ಜು.5]  ಬಜೆಟ್ ನಲ್ಲಿ ಅನ್ನ ಭಾಗ್ಯ ಅಕ್ಕಿಗೆ ಕತ್ತರಿ ಹಾಕಿದ್ದು ಸರಿಯಲ್ಲ.  ಇದು ಅನ್ಯಾಯವಾಗಿದ್ದು ಪುನರ್ ಪರಿಶೀಲನೆಗೆ ಸಿಎಂ ಬಳಿ ಮನವಿ ಮಾಡುತ್ತೇನೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ತುಮಕೂರು ನೋಣವಿನಕೆರೆ ಕಾಡುಸಿದ್ದೇಶ್ವರ ಮಠದಲ್ಲಿ ಮಾತನಾಡಿ, ಸಾಲಮನ್ನಾ ಮಾಡಿದ್ದು ಸ್ವಾಗತಾರ್ಹ. ಅನ್ನಭಾಗ್ಯ ಕಡಿತ ಮಾಡಿದ್ದು ಬಡವರಿಗೆ ತೊಂದರೆಯಾಗಲಿದೆ. ಇದರ ಪುನರ್ ಪರಿಶೀನಲೆ ಮಾಡುವಂತೆ ಮುಖ್ಯಮಂತ್ರಿ ಗಳಿಗೆ ಒತ್ತಾಯ ಮಾಡುತ್ತೇನೆ ಎಂದರು.

ರೈತರ ನಿರೀಕ್ಷೆ ಪೂರೈಕೆಗಾಗಿ ಬೆಲೆ ಏರಿ ಅನಿವಾರ್ಯ. ಪೆಟ್ರೋಲ್ ‌ಡಿಸೆಲ್‌ ವಿದ್ಯುತ್ ದರ‌ ಏರಿಕೆ ಅನಿವಾರ್ಯ. ಕೇಂದ್ರ ಸರ್ಕಾರ ‌ಸರಿಯಾಗಿ ಅನುದಾನ ಕೊಡದಿದ್ದರಿಂದ ಬೆಲೆ ಏರಿಕೆ ಮಾಡಬೇಕಾಗಿದೆ ರಾಜ್ಯದ ಸಂಪನ್ಮೂಲ ಕ್ರೋಢಿಕರಣ ಮಾಡೋದು ಮುಖ್ಯಮಂತ್ರಿ ಜವಾಬ್ದಾರಿಯಾಗಿತ್ತಿ ಎಂದು ಅಭಿಪ್ರಾಯಪಟ್ಟರು.