ಶಿರಸಿ[ಫೆ.19]: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ. ಫೆ.16ರ ಮಧ್ಯರಾತ್ರಿ ಈ ಕರೆ ಬಂದಿದ್ದು, ಈ ಸಂಬಂಧ ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ನೀಡಿದ ದೂರಿನಂತೆ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಂತ ಕುಮಾರ್ ಹೆಗಡೆ ಮಾನಸಿಕ ಅಸ್ವಸ್ಥ

ರಾತ್ರಿ 1.45ರ ಸುಮಾರಿಗೆ ಸಚಿವರ ಮನೆಯ ಸ್ಥಿರ ದೂರವಾಣಿಗೆ 0022330000 ಸಂಖ್ಯೆಯಿಂದ ಇಂಟರ್ನೆಟ್ ಮೂಲಕ ಕರೆ ಮಾಡಲಾಗಿದೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿ, ‘ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿಕೊಂಡಿರಿ, ಅನಂತ ಕುಮಾರ್ ಏನಾದ್ರು ಮುಸ್ಲಿಮರ ಬಗ್ಗೆ ಮಾತನಾಡಿದರೆ ಚೆನ್ನಾಗಿರುವುದಿಲ್ಲ. ಅನಂತ ಕುಮಾರ್ ಹಾಗೂ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ. ಅಯೋಧ್ಯೆ ಸಮೇತ ಎಲ್ಲವೂ ನಿಮಗೇ ಬೇಕೇ? ಅಯೋಧ್ಯೆ ತೆಗೆದುಕೊಳ್ಳಲು ನಾವು ಬಿಡಲ್ಲ’ ಎಂದು ಹಿಂದಿಯಲ್ಲಿ ಹೇಳಿದ್ದಾನೆ.

ಇದೇ ವೇಳೆ, ಸಚಿವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಸಚಿವರು ಮನೆಯಲ್ಲಿ ಇರಲಿಲ್ಲ. ಪತ್ನಿ ರೂಪಾ ಹೆಗಡೆ ಇದ್ದರು.

ಅಯೋಧ್ಯೆ ಬೇಕಾ? ಹೆಗಡೆಗೆ ಬೆದರಿಕೆ ಕರೆ