ಶಿರಸಿ[ಫೆ.18]  ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಮನೆಯ ಲ್ಯಾಂಡ್ ಲೈನ್‌ಗೆ ರವಿವಾರ ತಡರಾತ್ರಿ ಸುಮಾರು 1.45ರ ಸುಮಾರಿಗೆ ದೂರವಾಣಿ ಕರೆ ಬಂದಿದ್ದು, ಅವಾಚ್ಯ ಶಬ್ದಗಳಿಂದ ಅವರಿಗೆ ಬಯ್ಯಲು ಆರಂಭಿಸಿ, ಜೀವ ಬೆದರಿಕೆಯನ್ನು ಒಡ್ಡಲಾಗಿದೆ.

ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿಕೊಂಡು ಇರಬೇಕು. ಮುಸ್ಲಿಮರ ಬಗ್ಗೆ ಮಾತನಾಡಿದರೆ ನಿಮ್ಮನ್ನು, ನಿಮ್ಮ ಕುಟುಂಬವನ್ನು ಬಿಡುವದಿಲ್ಲ. ಜೀವ ತೆಗಯುತ್ತೇವೆ. ಅಯೋಧ್ಯೆ ನಿಮಗೆ ಬೇಕಾ? ಅದನ್ನು ಬಿಡುವುದಿಲ್ಲ. ನಿಮ್ಮ ಜೀವ ತೆಗೆಯುತ್ತೇವೆ, ಎಂದು ದೂರವಾಣಿ ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದಾನೆ.

ಅನಂತ್‌ ಕುಮಾರ್ ಹೆಗಡೆಯವರ ಪತ್ನಿ ರೂಪಾ ದೂರವಾಣಿ ಕರೆ ಸ್ವೀಕಾರ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ಬಯ್ಯಲು ಆರಂಭಿಸಿದಾಗ ರೂಪಾ ಅವರು ಕಾಲ್‍ಕಟ್ ಮಾಡಿದ್ದಾರೆ. ಆದಾಗ್ಯೂ, ಪದೇ ಪದೆ ಕರೆಗಳು ಬರುತ್ತಿದ್ದವು.ಸಚಿವರ ಆಪ್ತ ಸಹಾಯಕ ಸುರೇಶ್ ಶೆಟ್ಟಿ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಒಟ್ಟಿನಲ್ಲಿ ಈ ಬೆದರಿಕೆ ಕರೆ ಹಲವಾರು ಪ್ರಶ್ನೆಗಳು ಎತ್ತುವಂತೆ ಮಾಡಿದೆ.