ಹೈದರಾಬಾದ್‌[ಏ.11]: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಎಂನರೇಗಾ) ಯೋಜನೆಯಡಿ ಕೆಲಸ ಮಾಡುತ್ತಿದ್ದ ಕೆಲಸಗಾರರ ಮೇಲೆ ದೊಡ್ಡ ಮಣ್ಣಿನ ಗುಡ್ಡವೊಂದು ಬಿದ್ದ ಪರಿಣಾಮ 10 ಮಹಿಳೆಯರು ಜೀವಂತ ಸಮಾಧಿಯಾಗಿರುವ ದುರಂತ ಘಟನೆ ನಾರಾಯಣಪೇಟ್‌ ಜಿಲ್ಲೆಯಲ್ಲಿ ನಡೆದಿದೆ.

ಮಹಿಳಾ ಕಾರ್ಮಿಕರು ಮಧ್ಯಾಹ್ನದ ಊಟಕ್ಕೆಂದು 11.15ಕ್ಕೆ ಕುಳಿತಿದ್ದಾಗ ಮಣ್ಣಿನ ಗುಡ್ಡ ಕುಸಿದುಬಿದ್ದಿದ್ದು, 10 ಮಹಿಳೆಯರು ಮಣ್ಣಿನಲ್ಲಿ ಹೂತು ಹೋಗಿದ್ದಾರೆ. ಇನ್ನು ಮಣ್ಣಿನಡಿ ಸಿಕ್ಕಿಬಿದ್ದಿದ್ದ ಇಬ್ಬರನ್ನು ರಕ್ಷಿಸಲಾಗಿದ್ದು, ಓರ್ವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತೋರ್ವ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಭಾರೀ ಮಳೆಯಾದ ಪರಿಣಾಮವಾಗಿಯೇ ಈ ಮಣ್ಣಿನ ಗುಡ್ಡ ಕುಸಿದುಬಿದ್ದಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.