ಈ ಮೊದಲು ಸಾರಿಗೆ ಇಲಾಖೆ ಕುಡಿದು ವಾಹನ ಚಲಾಯಿಸಿ ಹತ್ಯೆಗೆ ಕಾರಣರಾದವರಿಗೆ ಉದ್ದೇಶಪೂರಿತ ಹತ್ಯೆ ಎಂದು ಭಾವಿಸಿ 10 ವರ್ಷಗಳ ಜೈಲು ಶಿಕ್ಷೆಗೆ ಶಿಫಾರಸ್ಸು ಮಾಡಿತ್ತು

ನವದೆಹಲಿ(ಡಿ.23): ಕುಡಿದು ವಾಹನ ಚಲಾಯಿಸಿ ಅಮಾಯಕರ ಸಾವಿಗೆ ಕಾರಣರಾಗುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸದಾಗಿ ಜಾರಿಗೊಳಿಸುತ್ತಿರುವ ನಿಯಮದ ಪ್ರಕಾರ ಕುಡಿದು ವಾಹನ ಚಲಾಯಿಸಿ ವ್ಯಕ್ತಿಯ ಸಾವಿಗೆ ಕಾರಣರಾದರೆ 7 ವರ್ಷ ಶಿಕ್ಷೆ ವಿಧಿಸಲಾಗುತ್ತದೆ.

ಈ ಮೊದಲು ಸಾರಿಗೆ ಇಲಾಖೆ ಕುಡಿದು ವಾಹನ ಚಲಾಯಿಸಿ ಹತ್ಯೆಗೆ ಕಾರಣರಾದವರಿಗೆ ಉದ್ದೇಶಪೂರಿತ ಹತ್ಯೆ ಎಂದು ಭಾವಿಸಿ 10 ವರ್ಷಗಳ ಜೈಲು ಶಿಕ್ಷೆಗೆ ಶಿಫಾರಸ್ಸು ಮಾಡಿತ್ತು. ಈಗ ನಿಯಮ ಮಾರ್ಪಡಿಸಿದ್ದು ಸೆಕ್ಷನ್ 304ಎ ಅಡಿ 7 ವರ್ಷ ಶಿಕ್ಷೆ ವಿಧಿಸಲಾಗುತ್ತದೆ. ದೇಶದ ಅರ್ಧದಷ್ಟು ದ್ವಿಚಕ್ರ ವಾಹನ ಮಾಲೀಕರ ಬಳಿ ತರ್ಡ್ ಪಾರ್ಟಿ ವಿಮೆಯಿಲ್ಲದ ಕಾರಣ ಮರಣ ಅಥವಾ ಸಾವು ಸಂಭವಿಸಿದರೆ ಪರಿಹಾರ ದೊರಕುವುದಿಲ್ಲ.

ಈ ಕಾರಣದಿಂದಾಗಿ ಎಲ್ಲ ವಾಹನಗಳು ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯವಾಗಿ ಹೊಂದಬೇಕೆಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ಸಂಸದೀಯ ಆಯ್ದ ಸಮಿತಿಯು ಮೋಟಾರು ವಾಹನಗಳ(ತಿದ್ದುಪಡಿ)ಕಾಯಿದೆಯ ವರದಿಯನ್ನು ರಾಜ್ಯಸಭೆಗೆ ಸಲ್ಲಿಸಿದ್ದು, ಶೀಘ್ರದಲ್ಲೇ ಕಾಯೆದೆ ಜಾರಿಗೊಳ್ಳಲಿದೆ.