ಈ ವೇಳೆ ಮಗು ಅಮ್ಮನ ಕಣ್ಣ ಮುಂದೆಯೇ ಆಟ ಆಡ್ತಾ ಇದ್ದದ್ದನ್ನ ನೋಡಿ ...
ಬೆಂಗಳೂರು(ಮಾ.21): ತಾಯಿಯೊಬ್ಬಳು ತಾನು ಸಾವನಪ್ಪುವ ಮುನ್ನ ಮಗಳನ್ನು ರಕ್ಷಿಸಿದ ಘಟನೆ ನಗರದ ಬ್ಯಾಟರಾಯನಪುರದಲ್ಲಿ ನಡೆದಿದೆ.
ಸರಳ ಎಂಬುವವರು ಕಳೆದ ಗುರುವಾರ ಮಗುವಿಗೆ ಹಾಲು ಕಾಯಿಸೋ ಸಲುವಾಗಿ ಗ್ಯಾಸ್ ಸ್ಟವ್ ಹೊತ್ತಿಸಲು ಮುಂದಾದಾಗ ಸಿಲಿಂಡರ್ ಸ್ಪೋಟಗೊಂಡಿತ್ತು. ಈ ವೇಳೆ ಮಗು ಅಮ್ಮನ ಕಣ್ಣ ಮುಂದೆಯೇ ಆಟ ಆಡ್ತಾ ಇದ್ದದ್ದನ್ನ ನೋಡಿ ಎಲ್ಲಿ ತನ್ನ ಮಗು ಬೆಂಕಿಗೆ ಸಿಕ್ಕಿ ಬೀಳುತ್ತೋ ಅನ್ನೋ ಭಯದಿಂದ ಅಡುಗೆ ಮನೆಯ ಬಾಗಿಲನ್ನು ಹಾಕಿಕೊಂಡಿದ್ದರು.
ಸಂಪೂರ್ಣ ಗಾಯಗೊಂಡಿದ್ದ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ..
