ನವಜಾತ ಗಂಡು ಮಗುವನ್ನು ರಸ್ತೆ ಪಕ್ಕದಲ್ಲಿ ಬಿಸಾಕಿ ಹೋದ ತಾಯಿ

Mother left the Baby boy in Road Side
Highlights

ಮಹಿಳೆಯೊಬ್ಬಳು ನವಜಾತ ಗಂಡು ಮಗುವೊಂದನ್ನು ರಸ್ತೆ ಪಕ್ಕದಲ್ಲಿ ಬಿಸಾಕಿ ಹೋದ ಅಮಾನವೀಯ  ಘಟನೆ ಶಿವಮೊಗ್ಗದ ಪೆನ್ಷನ್ ಮಹಲ್ಲಾ ಎರಡನೇ ತಿರುವಿನಲ್ಲಿ ನಡೆದಿದೆ.
ಇಂದು ಮುಂಜಾನೆ 5.45ರ ವೇಳೆಯಲ್ಲಿ ಮಹಿಳೆ ಹಾಗೂ ಒಬ್ಬ ಪುರುಷ ಮಗುವನ್ನು ಚರಂಡಿ ಪಕ್ಕ ಇಟ್ಟು ಹೋಗಿದ್ದಾರೆ. ಮಗುವನ್ನು ಚರಂಡಿ ಪಕ್ಕ ಬಿಟ್ಟು ಹೋಗುವ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೋಲಿಸರ ಪತ್ತೆ ಕಾರ್ಯಕ್ಕೆ ನೆರವು ನೀಡಿದೆ.

ಶಿವಮೊಗ್ಗ (ಏ.23): ಮಹಿಳೆಯೊಬ್ಬಳು ನವಜಾತ ಗಂಡು ಮಗುವೊಂದನ್ನು ರಸ್ತೆ ಪಕ್ಕದಲ್ಲಿ ಬಿಸಾಕಿ ಹೋದ ಅಮಾನವೀಯ  ಘಟನೆ ಶಿವಮೊಗ್ಗದ ಪೆನ್ಷನ್ ಮಹಲ್ಲಾ ಎರಡನೇ ತಿರುವಿನಲ್ಲಿ ನಡೆದಿದೆ.

ಇಂದು ಮುಂಜಾನೆ 5.45ರ ವೇಳೆಯಲ್ಲಿ ಮಹಿಳೆ ಹಾಗೂ ಒಬ್ಬ ಪುರುಷ ಮಗುವನ್ನು ಚರಂಡಿ ಪಕ್ಕ ಇಟ್ಟು ಹೋಗಿದ್ದಾರೆ. ಮಗುವನ್ನು ಚರಂಡಿ ಪಕ್ಕ ಬಿಟ್ಟು ಹೋಗುವ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೋಲಿಸರ ಪತ್ತೆ ಕಾರ್ಯಕ್ಕೆ ನೆರವು ನೀಡಿದೆ.

ಮಗುವಿನ ಕಾಲಿಗೆ ಹಾಕಿರುವ ಟ್ಯಾಗ್‍ನಲ್ಲಿ ಆಸ್ಪತ್ರೆ, ತಾಯಿಯ ವಿವರ ದಾಖಲಾಗಿದ್ದು ತಾಯಿಯ ಹೆಸರು ಧನಲಕ್ಷ್ಮಿ ಎಂದು ಆಸ್ಪತ್ರೆಯ ಟ್ಯಾಗ್‍ನಲ್ಲಿ ನಮೂದಿಸಲಾಗಿದೆ. 

ಹಾಸನ ಶ್ರೀ ಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಧನಲಕ್ಷ್ಮಿಗೆ 20 ರಂದು ಹೆರಿಗೆ ಆಗಿ ಗಂಡು ಮಗು ಜನಿಸಿತು ಎಂದು ಟ್ಯಾಗ್ ಮೂಲಕ ಮಾಹಿತಿ ಸಿಕ್ಕಿದ್ದು ಇದು ನೈಜತೆಯನ್ನು ಪೋಲಿಸರು ಪತ್ತೆ ಹಚ್ಚಬೇಕಿದೆ. 
ಇದೀಗ ಮಗುವನ್ನು ಮೆಗಾನ್ ಆಸ್ಪತ್ರೆ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ್ದು, ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. 
 
loader