ನಿಯಮಾವಳಿ ಇದ್ದರೂ 2ನೇ ಮಗು ಬಯಸುತ್ತಿಲ್ಲ ಚೀನಿಯರು

First Published 23, Jan 2018, 9:04 AM IST
Most in China dont want second child
Highlights

ಚೀನಾದಲ್ಲಿ ಇಬ್ಬರು ಮಕ್ಕಳು ನಿಯಮಾವಳಿ ಜಾರಿ ಹೊರತಾಗಿಯೂ, ಚೀನಾದ ರಾಜಧಾನಿ ಬೀಜಿಂಗ್’ನಲ್ಲಿ ಕೆಲವೇ ಕೆಲವು ಕುಟುಂಬಸ್ಥರು 2ನೇ ಮಗು ಹೊಂದುವ ಇಂಗಿತ ಹೊಂದಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ನವದೆಹಲಿ (ಜ.23): ಚೀನಾದಲ್ಲಿ ಇಬ್ಬರು ಮಕ್ಕಳು ನಿಯಮಾವಳಿ ಜಾರಿ ಹೊರತಾಗಿಯೂ, ಚೀನಾದ ರಾಜಧಾನಿ ಬೀಜಿಂಗ್’ನಲ್ಲಿ ಕೆಲವೇ ಕೆಲವು ಕುಟುಂಬಸ್ಥರು 2ನೇ ಮಗು ಹೊಂದುವ ಇಂಗಿತ ಹೊಂದಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಆದರೆ, 2001ರಲ್ಲಿ ಶೇ.70.4 ಮಂದಿ ಇಬ್ಬರು ಮಕ್ಕಳನ್ನು ಹೊಂದಬೇಕು ಎಂಬ ಆಕಾಂಕ್ಷೆ ಹೊಂದಿದ್ದರು. ಆದರೆ, ಇದೀಗ ಶೇ.58.6ರಷ್ಟು ಜನರಿಗೆ ಮಾತ್ರ ಇಬ್ಬರು ಮಕ್ಕಳು ಹೊಂದಬೇಕೆಂಬ ಬಯಕೆ ಇದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಚೀನಾದಲ್ಲಿ ಶೇ.72.6 ದಂಪತಿಗೆ ಒಂದೇ ಮಗುವಿದ್ದು, ಶೇ.10.8ರಷ್ಟು ಮಂದಿ ಮಾತ್ರ ಇಬ್ಬರು ಮಕ್ಕಳನ್ನು ಹೆತ್ತಿದ್ದಾರೆ ಎಂಬುದನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

loader