ಕೇಂದ್ರ ಸರ್ಕಾರ ಆಂದೋಲನದ ರೂಪದಲ್ಲಿ ಜಾರಿಗೆ ತಂದಿದ್ದ ಜನಧನ್ ಯೋಜನೆಯಲ್ಲಿ ಭರ್ಜರಿ 1 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಮೊತ್ತ ಠೇವಣಿಯಾಗಿದೆ.

ನವದೆಹಲಿ (ಜು.11): ದೇಶದ ಪ್ರತಿ ನಾಗರಿಕರಿಗೂ ಬ್ಯಾಂಕ್‌ ಖಾತೆ ಒದಗಿಸಬೇಕೆಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಆಂದೋಲನದ ರೂಪದಲ್ಲಿ ಜಾರಿಗೆ ತಂದಿದ್ದ ಜನಧನ್ ಯೋಜನೆಯಲ್ಲಿ ಭರ್ಜರಿ 1 ಲಕ್ಷ ಕೋಟಿ ರು. ಠೇವಣಿ ಸಂಗ್ರಹವಾಗಿದೆ. ಜನಧನ್‌ ಯೋಜನೆಯಡಿ ತೆರೆಯಲ್ಪಟ್ಟಿದ್ದ 36.06 ಕೋಟಿ ಉಳಿತಾಯ ಖಾತೆಗಳಲ್ಲಿ ಜೂ.6 ರವರೆಗೆ 99,649,84 ರು. ಠೇವಣಿ ಇತ್ತು. ಇದೀಗ ಜುಲೈ 3 ರ ಹೊತ್ತಿಗೆ ಠೇವಣಿ ಮೊತ್ತ 1,00,495 ಕೋಟಿ ರೂಪಾಯಿಗೆ ತಲುಪಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2014 ರಲ್ಲಿ ಕೇಂದ್ರ ಸರ್ಕಾರ ದೇಶದ ನಾಗರಿಕರು ಬ್ಯಾಂಕ್‌ ವ್ಯವಸ್ಥೆಯೊಳಗೆ ಬರಬೇಕು. ಬ್ಯಾಂಕ್‌ ಸೌಲಭ್ಯಗಳಿಂದ ಯಾರೂ ವಂಚಿತರಾಗಬಾರದೆಂಬ ಉದ್ದೇಶದೊಂದಿಗೆ ಶೂನ್ಯ ಮೊತ್ತದಲ್ಲಿ ಉಳಿತಾಯ ಖಾತೆ ಆರಂಭಿಸಲು ಅನುವು ಮಾಡಿಕೊಟ್ಟಿತ್ತು. ಈ ಯೋಜನೆಯಲ್ಲಿ 28.44 ಕೋಟಿ ಖಾತೆದಾರರಿಗೆ ಓವರ್‌ಡ್ರಾಫ್ಟ್‌ ಮತ್ತು ರುಪೇ ಕಾರ್ಡ್‌ ಸೌಲಭ್ಯ ನೀಡಲಾಗಿದೆ. ಯೋಜನೆ ಯಶಸ್ಸು ಕಂಡ ಪರಿಣಾಮ 2018 ಆಗಸ್ಟ್‌ 28 ರಿಂದ ನಂತರ ಅಪಘಾತ ಜೀವವಿಮೆ ಸೌಲಭ್ಯವನ್ನೂ 1 ಲಕ್ಷ ರು.ನಿಂದ 2 ಲಕ್ಷ ರು.ಗೆ ಏರಿಸಲಾಗಿದೆ. ಅಲ್ಲದೆ ಓವರ್‌ಡ್ರಾಫ್ಟ್‌ ಪ್ರಮಾಣವನ್ನು 5000 ರು.ನಿಂದ 10000 ರು.ಗೆ ಏರಿಸಲಾಗಿದೆ.