ಕಂಡ ಕಂಡವರ ದಾಳಿ ಮಾಡುತ್ತಿರುವ ಹುಚ್ಚು ಮಂಗ; ಜನ ಕಂಗಾಲು

First Published 2, Feb 2018, 12:28 PM IST
Monkey attack on People
Highlights

ಹುಚ್ಚು ಮಂಗವೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ 40 ಕ್ಕೂ ಅಧಿಕ ಜನರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಬಸವಕಲ್ಯಾಣ ತಾಲೂಕಿನ ಬೆಟಬಾಲಕುಂದಾ ಗ್ರಾಮದಲ್ಲಿ ನಡೆದಿದೆ.

ಬೀದರ್ (ಫೆ.02): ಹುಚ್ಚು ಮಂಗವೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ 40 ಕ್ಕೂ ಅಧಿಕ ಜನರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಬಸವಕಲ್ಯಾಣ ತಾಲೂಕಿನ ಬೆಟಬಾಲಕುಂದಾ ಗ್ರಾಮದಲ್ಲಿ ನಡೆದಿದೆ.

ಕಳೆದ ಒಂದು ವಾರದಿಂದ ಗ್ರಾಮದ ಸುತ್ತ ಸುತ್ತಾಡುತ್ತಿದ್ದ ಮಂಗ ಹುಚ್ಚನಂತೆ ವರ್ತಿಸುತ್ತಿತ್ತು. ಒಂಟಿಯಾಗಿದ್ದವರನ್ನ ಟಾರ್ಗೆಟ್ ಮಾಡಿಕೊಂಡು ಮಂಗ ದಾಳಿ ಮಾಡುತ್ತಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಬಸವಕಲ್ಯಾಣ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಗ್ರಾಮದಲ್ಲಿ ಮಂಗನ ಅಟ್ಟಹಾಸದ ಭಯಕ್ಕೆ ಗ್ರಾಮಸ್ಥರು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ತಿರುಗಾಡುವಂಥ ಸ್ಥಿತಿ ನಿರ್ಮಾಣವಾಗಿದೆ.

loader