ಮೋದಿಕೇರ್‌’ ಯೋಜನೆಯಿಂದ ಪಶ್ಚಿಮ ಬಂಗಾಳ ಹೊರಕ್ಕೆ

First Published 15, Feb 2018, 1:11 PM IST
Modicare move just another Didi stance against centre
Highlights

ಮೋದಿ ಕೇರ್‌ ಎಂದೇ ಬಣ್ಣಿತ ಕೇಂದ್ರ ಸರ್ಕಾರದ ಉಚಿತ ಆರೋಗ್ಯ ವಿಮಾ ಯೋಜನೆಯಿಂದ ಹೊರಗುಳಿಯಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.

ಕೊಲ್ಕತಾ: ಮೋದಿ ಕೇರ್‌ ಎಂದೇ ಬಣ್ಣಿತ ಕೇಂದ್ರ ಸರ್ಕಾರದ ಉಚಿತ ಆರೋಗ್ಯ ವಿಮಾ ಯೋಜನೆಯಿಂದ ಹೊರಗುಳಿಯಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.

ಈಗಾಗಲೇ ನಮ್ಮ ರಾಜ್ಯದಲ್ಲಿ ‘ಸ್ವಾಸ್ಥ್ಯ ಸಾಥಿ ಯೋಜನೆ’ ಮೂಲಕ 50 ಲಕ್ಷ ಜನರಿಗೆ ಉಚಿತ ಆರೋಗ್ಯ ಸೇವೆ ನೀಡಲಾಗುತ್ತಿದೆ. ಹೀಗಿರುವಾಗ ರಾಜ್ಯದ ಜನರಿಗೆ ಹೊಸದೊಂದು ವಿಮಾ ಯೋಜನೆಯ ಅಗತ್ಯವಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ಈ ಮೂಲಕ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಿಂದ ಹಿಂದಕ್ಕೆ ಸರಿಯಲು ಮುಂದಾದ ಪ್ರಥಮ ರಾಜ್ಯವಾಗಿ ಪಶ್ಚಿಮ ಬಂಗಾಳ ಗುರುತಿಸಲ್ಪಟ್ಟಿದೆ. 10 ಕೋಟಿ ಕುಟುಂಬಗಳ ಜನರಿಗೆ ತಲಾ 5 ಲಕ್ಷ ರು. ಆರೋಗ್ಯ ವಿಮೆ ಯೋಜನೆಯನ್ನು ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ ಪ್ರಕಟಿಸಿತ್ತು. ಈ ಯೋಜನೆಯಲ್ಲಿ ರಾಜ್ಯಗಳಿಂದ ಶೇ.40ರಷ್ಟುವಿಮಾ ಮೊತ್ತ ಸಂಗ್ರಹಿಸುವ ಗುರಿಯನ್ನು ಕೇಂದ್ರ ಹೊಂದಿದೆ.

loader