Asianet Suvarna News Asianet Suvarna News

ಮೋದಿ ದುರ್ಬಲ ಪ್ರಧಾನಿ: ರಾಹುಲ್ ಗಾಂಧಿ

ಅಮೆರಿಕಾ ಪ್ರವಾಸ  ಸಂದರ್ಭದಲ್ಲಿ ಮಹತ್ವದ ವಿಚಾರಗಳನ್ನು ಚರ್ಚಿಸದ ನರೇಂದ್ರ ಮೋದಿಯವರನ್ನು ದುರ್ಬಲ ಪ್ರಧಾನಿಯೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ  ಟೀಕಿಸಿದ್ದಾರೆ.

Modi Weak PM Says Rahul Gandhi
  • Facebook
  • Twitter
  • Whatsapp

ನವದೆಹಲಿ:  ಅಮೆರಿಕಾ ಪ್ರವಾಸ  ಸಂದರ್ಭದಲ್ಲಿ ಮಹತ್ವದ ವಿಚಾರಗಳನ್ನು ಚರ್ಚಿಸದ ನರೇಂದ್ರ ಮೋದಿಯವರನ್ನು ದುರ್ಬಲ ಪ್ರಧಾನಿಯೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ  ಟೀಕಿಸಿದ್ದಾರೆ.

ಡೊನಾಲ್ಡ್ ಟ್ರಂಪ್’ರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಧಾನಿ ಮೋದಿ ‘ಭಾರತಾಡಳಿತದ ಜಮ್ಮು & ಕಾಶ್ಮೀರ’ ಪದದ ಬಳಕೆ ಹಾಗೂ ಎಚ್1-ಬಿ ವೀಸಾ ವಿಚಾರದ ಬಗ್ಗೆ ಪ್ರಸ್ತಾಪನೇ ಎತ್ತಿಲ್ಲ. ಭಾರತವು ದುರ್ಬಲ ಪ್ರಧಾನಿಯನ್ನು ಹೊಂದಿದೆ ಎಂದು ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

ಟ್ರಂಪ್ ಜತೆ ಮಾತುಕತೆ ಸಂದರ್ಭದಲ್ಲಿ ಮೋದಿ ಮಹತ್ವದ ವಿಚಾರಗಳನ್ನು ನಿರ್ಲಕ್ಷಿಸಿದ್ದಾರೆ ಎಂದ ರಾಹುಲ್ ಗಾಂಧಿ, ಅಮೆರಿಕಾ ಪ್ರವಾಸವು ಮೋದಿಯವರಿಗೆ ಬರೇ ಫೋಟೋ  ಕ್ಲಿಕ್ಕಿಸುವ ಅವಕಾಶವಾಗಿತ್ತು ಎಂದು ಟೀಕಿಸಿದ್ದಾರೆ.

Follow Us:
Download App:
  • android
  • ios