ಮೋದಿ ಸ್ವಾಗತಕ್ಕೆ ಬೆಂಗಳೂರಲ್ಲೂ ಭರ್ಜರಿ ತಯಾರಿ: ಹಳೇ ರೋಡು.. ಹೊಸ ಟಾರು.., ರಸ್ತೆಗಳು ಗುಂಡಿಮುಕ್ತ
ಬೆಂಗಳೂರಲ್ಲೂ ಪ್ರಧಾನಿ ಕಾರ್ಯಕ್ರಮಕ್ಕೆ ಭಾರೀ ಸಿದ್ಧತೆ ನಡೆದಿದೆ. ರಾತ್ರಿಯಿಡೀ ಮೋದಿ ಸ್ವಾಗತಕ್ಕೆ ತುರುಸಿನ ಚಟುವಟಿಕೆಗಳು ನಡೆದಿದ್ದು ಗುಂಡಿಮಯ ರಸ್ತೆಗಳೆಲ್ಲಾ ಲಕ ಲಕ ಎಂದು ಹೊಳೆಯುತ್ತಿವೆ.
ನವದೆಹಲಿ(ಅ.29): ಪ್ರಧಾನಿ ನರೆಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಮೋದಿ ಸ್ವಾಗತಕ್ಕೆ ಬೆಂಗಳೂರಲ್ಲಿ ಭರ್ಜರಿ ತಯಾರಿ ನಡೆದಿದ್ದು.. ರಾತ್ರೋರಾತ್ರಿ ಗುಂಡಿಮಯ ರಸ್ತೆ ಲಕಲಕ ಅಂತಾ ಹೊಳೆಯುಂವತೆ ಮಾಡಿದ್ದಾರೆ.. ಹೆಚ್ಎಎಲ್, ದೊಮ್ಮಲೂರು, ಇಂದಿರಾನಗರ, ಹಲಸೂರು, ಎಂಜಿ ರಸ್ತೆ, ಕಂಟೋನ್ ಮೆಂಟ್ ರಸ್ತೆ ಮೂಲಕ ಅರಮನೆ ಮೈದಾನಕ್ಕೆ ಪ್ರಧಾನಿ ಮೋದಿ ತಲುಪಲಿದ್ದಾರೆ.. ಹೀಗಾಗಿ ಈ ಮಾರ್ಗದ ಎಲ್ಲಾ ಗುಂಡಿಗಳನ್ನು ಬಿಬಿಎಂಪಿ ರಾತ್ರೋ ರಾತ್ರಿ ಮುಚ್ಚುವ ಕೆಲಸ ಮಾಡ್ತು..
ಉರಗ ತಜ್ಞರಿಂದ ಏೡ'ಪೋರ್ಟ್ ಪರಿಶೀಲನೆ
ಮಳೆ ಹಿನ್ನೆಲೆಯಲ್ಲಿ ಹಾವುಗಳ ಸಂಖ್ಯೆ ಹೆಚ್ಚಿವೆ. ಹೀಗಾಗಿ ಮೋದಿ ಆಗಮನಕ್ಕೂ ಮುನ್ನ ಹೆಚ್ಎಎಲ್ ಏರ್ ಪೋರ್ಟ್ ನಲ್ಲಿ ಉರಗತಜ್ಞರಿಂದ ಪರಿಶೀಲನೆ ಕಾರ್ಯ ಕೂಡ ನಡೀತು..
ಅರಮನೆ ಮೈದಾನದಲ್ಲಿ ಸೌಂದರ್ಯ ಲಹರಿ ಪಾರಾಯಣೋತ್ಸವ ಕಾರ್ಯಕ್ರಮ ನಡೆಯಲಿದ್ದು.. ಬೃಹತ್ ವೇದಿಕೆ ಸಿದ್ಧಗೊಳಿಸಲಾಗಿದೆ.. ಮೂವರು ಡಿಸಿಪಿ, ೧೨ ಎಸಿಪಿ, ೪೦ ಇನ್ಸ್ ಪೆಕ್ಟರ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸಪ್ಗಾವಲು ಹಾಕಲಾಗಿದೆ..ಶ್ವಾನದಳವನ್ನ ಕೂಡ ಬಳಕೆ ಮಾಡಲಾಗುತ್ತಿದೆ.
ಒಟ್ಟಿನಲ್ಲಿ ಪ್ರಧಾನಿ ಸ್ವಾಗತಕ್ಕೆ ಬೆಂಗಳೂರು ಸಜ್ಜಾಗಿದೆ.. ಇನ್ನೊಂದು ವಿಶೇಷ ಅಂದ್ರೆ ಸಿಎಂ ಡೆಡ್ಲೈನ್ಗೂ ಗುಂಡಿ ಮುಕ್ತವಾಗದ ರಸ್ತೆ ಮೋದಿ ಆಗಮನದ ಈ ಸಮಯದಲ್ಲಿ ಗುಂಡಿ ಮುಕ್ತವಾಗಿರೋದು ಸಂತಸದ ಸಂಗತಿ