ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇದೇ ಮೊದಲ ಬಾರಿಗೆ ಬಿಜೆಪಿ ಸಂಸದರೊಬ್ಬರು ಮುಕ್ತವಾಗಿ ಕಿಡಿಕಾರಿದ್ದಾರೆ. ಸಂಸದೀಯ ಸಭೆಯಲ್ಲಿ ರೈತರ ಸಮಸ್ಯೆಯನ್ನು ಪ್ರಸ್ತಾಪಿಸಿದಾಗ ಕೋಪಗೊಂಡ ಪ್ರಧಾನಿ ಶಟ್ ಅಪ್ ಎಂದು ಹೇಳಿದ್ದಾರೆ.

ನವದೆಹಲಿ (ಸೆ.02): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇದೇ ಮೊದಲ ಬಾರಿಗೆ ಬಿಜೆಪಿ ಸಂಸದರೊಬ್ಬರು ಮುಕ್ತವಾಗಿ ಕಿಡಿಕಾರಿದ್ದಾರೆ. ಸಂಸದೀಯ ಸಭೆಯಲ್ಲಿ ರೈತರ ಸಮಸ್ಯೆಯನ್ನು ಪ್ರಸ್ತಾಪಿಸಿದಾಗ ಕೋಪಗೊಂಣಡ ಪ್ರಧಾನಿ ಶಟ್ ಅಪ್ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಗೊಂಡಿಯಾ-ಭಾಂಧಾರ ಕ್ಷೇತ್ರದ ಸಂಸದರಾದ ನಾನಾ ಪಟೋಲೆ ಸಂಸದೀಯ ಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುತ್ತಾ, ಕೃಷಿ ವಲಯಕ್ಕೆ ಕೇಂದ್ರ ಸರ್ಕಾರದ ಹೂಡಿಕೆಯನ್ನು ಹೆಚ್ಚಿಸಬೇಕು, ಹಸಿರು ತೆರಿಗೆಯನ್ನು ಹೆಚ್ಚಿಸಬೇಕು ಮತ್ತು ಓಬಿಸಿ ಸಚಿವಾಲಯವನ್ನು ನಿರ್ಮಿಸಿ ಎಂದು ಸಲಹೆ ನೀಡಿದರು. ಅವರ ಸಲಹೆಯನ್ನು ಪ್ರಶಂಸಿಸುವುದರ ಬದಲು ಕೋಪಗೊಂಡ ಪ್ರಧಾನಿ ನರೇಂದ್ರ ಮೋದಿ ಶಟ್ ಅಪ್ ಎಂದು ಹೇಳಿದ್ದಾರೆ.ಇದರಿಂದ ನಾನಾ ಪಟೋಲೆ ಅಸಮಾಧಾನಗೊಂಡಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಾನು ಪಕ್ಷದ ಹಿಟ್ ಲಿಸ್ಟ್'ನಲ್ಲಿದ್ದೇನೆ. ನಾನು ಯಾರಿಗೂ ಹೆದರುವುದಿಲ್ಲ. ನಾನು ಮಂತ್ರಿಯಾಗಲು ಬಯಸಿದವನಲ್ಲ. ಕೇಂದ್ರ ಸಚಿವರು ರಾಜ್ಯದ ಭಯದಲ್ಲಿದ್ದಾರೆ. ರೈತರ ಪ್ರತಿಭಟನೆಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆಯನ್ನು ನಡೆಸಿಲ್ಲ. ಇದೇ ವಿಚಾರವಾಗಿ ನಾನು ಇಂದು ಮಾತನಾಡಿದಾಗ ಮೋದಿಯವರು ಶಟ್ ಅಪ್ ಎಂದು ನನ್ನ ಮೇಲೆ ರೇಗಾಡಿದ್ದಾರೆ ಎಂದು ನಾನಾ ಪಟೋಲೆ ಹೇಳಿದ್ದಾರೆ.

(ಪೋಟೋ ಕೃಪೆ: ಹಿಂದೂಸ್ಥಾನ್ ಟೈಮ್ಸ್)