Asianet Suvarna News Asianet Suvarna News

ಭ್ರಷ್ಟ, ಅಸಮರ್ಥ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಮೋದಿ ನಡೆ!

ಭ್ರಷ್ಟ, ಅಸಮರ್ಥ ಅಧಿಕಾರಿಗಳ ಮನೆಗೆ ಕಳುಹಿಸಿ: ಪಿಎಸ್‌ಯು ಬ್ಯಾಂಕ್‌ಗಳಿಗೆ ಕೇಂದ್ರದ ಸೂಚನೆ| ಇನ್ನು ಸರ್ಕಾರಿ, ಬ್ಯಾಂಕ್‌ ನೌಕರರ ಕೆಲಸ 2 ವಾರಗಳಿಗೊಮ್ಮೆ ಪರಿಶೀಲನೆ| ಭ್ರಷ್ಟಾಚಾರದ ಕಡಿವಾಣ, ಕರ್ತವ್ಯ ನಿಷ್ಠೆ ಹೆಚ್ಚಿಸಲು ಈ ಕ್ರಮ| ಮುಂದಿನ ತಿಂಗಳಿಂದ ಪ್ರತೀ 15 ದಿನಗಳಿಗೊಮ್ಮೆ ವರದಿ ಸಲ್ಲಿಸಿ| ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳಿಗೆ ಸಿಬ್ಬಂದಿ ಇಲಾಖೆ ಸೂಚನೆ

Modi govt directs banks PSUs to review employees for corruption non performance
Author
Bangalore, First Published Jun 22, 2019, 8:19 AM IST

ನವದೆಹಲಿ[ಜೂ.22]: ಇತ್ತೀಚೆಗಷ್ಟೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಕೇಂದ್ರೀಯ ಪರೋಕ್ಷ ತೆರಿಗೆ ಹಾಗೂ ಸುಂಕ ಇಲಾಖೆಯ 25ಕ್ಕೂ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ್ದ ಕೇಂದ್ರ ಸರ್ಕಾರ, ಇದೀಗ ಬ್ಯಾಂಕಿಂಗ್‌ ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಭ್ರಷ್ಟಾಚಾರ ತೊಡೆದು ಹಾಕುವ ನಿಟ್ಟಿನಲ್ಲಿ ನೌಕರರ ಸೇವಾ ದಾಖಲೆಗಳನ್ನು ಪರಿಶೀಲನೆಗೊಳಪಡಿಸಲು ಸೂಚನೆ ನೀಡಿದೆ.

ಮೋದಿಗೆ 2019ರ ವಿಶ್ವದ ಪ್ರಬಲ ವ್ಯಕ್ತಿ ಪಟ್ಟ!

ಅಲ್ಲದೆ, ಕರ್ತವ್ಯ ನಿಷ್ಠೆ ಮೆರೆಯದ ಅಧಿಕಾರಿಗಳನ್ನು ಗುರುತಿಸುವಂತೆಯೂ ಸೂಚಿಸಲಾಗಿದೆ. ಇದರ ಜೊತೆಯಲ್ಲೇ, 2019ರ ಜು.15ರಿಂದ ಪ್ರತೀ ತಿಂಗಳು 15 ದಿನಗಳಿಗೊಮ್ಮೆ ಎಲ್ಲ ಸಚಿವಾಲಯಗಳು ತಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ವರದಿಯನ್ನು ತನಗೆ ನೀಡಬೇಕು ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ತಿಳಿಸಿದೆ.

ಮೋದಿ ಕರೆದ ಸಂಸದರ ಔತಣಕೂಟಕ್ಕೆ ಸೋನಿಯಾ, ರಾಹುಲ್ ಗೈರು!

ಈ ಬಗ್ಗೆ ಶುಕ್ರವಾರ ಕೇಂದ್ರ ಸರ್ಕಾರ ಎಲ್ಲ ಇಲಾಖೆಗಳಿಗೂ ಪತ್ರ ಬರೆದಿರುವ ಸಿಬ್ಬಂದಿ ಸಚಿವಾಲಯ, ಬ್ಯಾಂಕ್‌ಗಳು, ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕತಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಕೆಲಸವನ್ನು ಕಾಲ-ಕಾಲಕ್ಕೆ ಪರಿಶೀಲನೆಗೊಳಪಡಿಸಬೇಕು. ಈ ಮೂಲಕ ಸರ್ಕಾರಿ ನೌಕರರು ಯಾವುದೇ ನಿಯಂತ್ರಣಕ್ಕೊಳಪಟ್ಟಿರುವುದಿಲ್ಲ ಎಂಬ ಭಾವನೆಯನ್ನು ತೊಡೆದು ಹಾಕಬೇಕು ಎಂದು ತಿಳಿಸಿದೆ.

Follow Us:
Download App:
  • android
  • ios