ಲಂಡನ್‌[ಜೂ.22]: ಜಾಗತಿಕ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ. ಬ್ರಿಟಿಷ್‌ ಹೆರಾಲ್ಡ್‌ ನಿಯತಕಾಲಿಕೆ ನಡೆಸಿದ ವಾಚಕರ ಸಮೀಕ್ಷೆಯಲ್ಲಿ ಮೋದಿ 2019ರ ವಿಶ್ವದ ಅತ್ಯಂತ ಪ್ರಬಲ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಹಿಂದಿಕ್ಕಿ ಮೋದಿ ಅಗ್ರ ಸ್ಥಾನಿಯಾಗಿದ್ದಾರೆ.

ಮೋದಿ ಕರೆದ ಸಂಸದರ ಔತಣಕೂಟಕ್ಕೆ ಸೋನಿಯಾ, ರಾಹುಲ್ ಗೈರು!

ಬ್ರಿಟಿಷ್‌ ಹೆರಾಲ್ಡ್‌ ನಡೆಸಿದ ಸಮೀಕ್ಷೆ ಶನಿವಾರ ಮಧ್ಯರಾತ್ರಿ ಮುಕ್ತಾಯವಾಗಿದೆ. ಮೋದಿ ಶೇ.30.9 ಮತಗಳನ್ನು ಪಡೆದುಕೊಂಡರೆ, ಸಮೀಪದ ಪ್ರತಿಸ್ಪರ್ಧಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಶೇ.29.9ರಷ್ಟುಮತಗಳನ್ನು ಪಡೆದುಕೊಂಡಿದ್ದಾರೆ. ಈ ಸಮೀಕ್ಷೆಯ ಸಂಪೂರ್ಣ ವಿವರ ಜೂ.15ರ ಸಂಚಿಕೆಯಲ್ಲಿ ಪ್ರಕಟವಾಗಲಿದ್ದು, ಮೋದಿ ಮುಖಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ.

ಒಂದು ದೇಶ - ಒಂದು ಚುನಾವಣೆ : ಪ್ರಧಾನಿ ಮೋದಿ ಮಹತ್ವದ ನಿರ್ಧಾರ

ಸಾಮಾನ್ಯ ಸಮೀಕ್ಷೆಗಳಂತಲ್ಲದೇ, ಬ್ರಿಟಿಷ್‌ ಹೆರಾಲ್ಡ್‌ ಈ ಬಾರಿ ಕರಾರುವಕ್ಕಾದ ಸಮೀಕ್ಷೆಗಾಗಿ ಒಟಿಪಿ (ಒನ್‌ ಟೈಮ್‌ ಪಾಸ್ವರ್ಡ್‌) ವ್ಯವಸ್ಥೆಯನ್ನು ಪರಿಚಯಿಸಿತ್ತು. ಬ್ರಿಟಿಷ್‌ ಹೆರಾಲ್ಡ್‌ನ ಮೇ- ಜೂನ್‌ ಸಂಚಿಕೆಯಲ್ಲಿ ನೂಜಿಲೆಂಡ್‌ ಪ್ರಧಾನಿ ಜಸಿಂಡಾ ಅರ್ಡೆರ್ನ್‌ ಹಾಗೂ ಮಾಚ್‌ರ್‍ ಏಪ್ರಿಲ್‌ ಸಂಚಿಕೆಯಲ್ಲಿ ವ್ಲಾಡಿಮಿರ್‌ ಪುಟಿನ್‌ ಮುಖಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದರು.