Asianet Suvarna News Asianet Suvarna News

ಮೋದಿ 'ನಾಮರ್ದ' ಎಂದಿದ್ದ ಶಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ

ಮೋದಿ ನಾಮರ್ದ ಎಂಬ ಶಾಸಕ| ಅಭಿಮಾನಿಗಳಿಂದ ಶುರುವಾಯ್ತು ಪ್ರತಿಭಟನೆ| ಕ್ಷಮೆ ಯಾಚಿಸ್ತಾರಾ ನಾರಾಯಣ ರಾವ್?

Modi Fans Protesting Against B Narayana Rao who called PM as namard
Author
Bangalore, First Published Mar 20, 2019, 1:09 PM IST

ಕಲಬುರಗಿ[ಮಾ.20]: ಕಲಬುರಗಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸುತ್ತಾ ‘ನಾಮರ್ದ್’ ಎಂಬ ಕೀಳುಪದ ಬಳಕೆ ಮಾಡಿದ್ದರು ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿ. ನಾರಾಯಣರಾವ್ ವಿರುದ್ಧ ಕಲಬುರಗಿಯಲ್ಲಿ ಮೋದಿ ಅಭಿಮಾನಿಗಳ ಪ್ರತಿಭಟನೆ ಆರಂಭಿಸಿದ್ದಾರೆ.

ಮೋದಿ ‘ನಾಮರ್ದ’, ಕಾಂಗ್ರೆಸ್ ಶಾಸಕನ ಕೀಳು ಹೇಳಿಕೆ

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಕಲಬುರಗಿಯ ಸರ್ದಾರ ವಲ್ಲಭಭಾಯಿ ಪಟೇಲ್ ಸರ್ಕಲ್ ಪ್ರತಿಭಟನೆ ನಡೆಸುತ್ತಿರುವ ಅಭಿಮಾನಿಗಳು ಶಾಸಕ ನಾರಾಯಣರಾವ್ ಭಾವಚಿತ್ರಕ್ಕೆ ಸಗಣಿ ಎರಚಿದ್ದಾರೆ. ಹೇಳಿಕೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಮೋದಿ ನಾಮರ್ದ ಎಂಬ ಹೇಳಿಕೆ ನೀಡಿರುವ ಶಾಸಕ ನಾರಾಯಣರಾವ್ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

Modi Fans Protesting Against B Narayana Rao who called PM as namard

ಏನಿದು ಪ್ರಕರಣ? 

ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಸೋಮವಾರ ಕಲಬುರಗಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಭಾಷಣ ಮಾಡುವ ವೇಳೆ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಣ್ಣಿಸುತ್ತಿದ್ದರು. ಈ ಭರದಲ್ಲಿ ಪ್ರಧಾನಿ ಮೋದಿ ಅವರನ್ನು ನಿಂದಿಸುವುದಕ್ಕಾಗಿ ಹಿಂದಿ ಶಾಯರಿ, ಪದಪುಂಜಗಳನ್ನು ಉಪಯೋಗಿಸಿದ ಅವರು ‘ನಾಮರ್ದ್’ ಎಂದು ಜರೆದಿದ್ದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ

Follow Us:
Download App:
  • android
  • ios