ಮೋದಿ ‘ನಾಮರ್ದ’- ಬಸವಕಲ್ಯಾಣ ಶಾಸಕ ಬಿ.ನಾರಾಯಣಸ್ವಾಮಿ ಕೀಳು ಹೇಳಿಕೆ
ಕಲಬುರಗಿ[ಮಾ.19]: ಬಸವಕಲ್ಯಾಣ ಶಾಸಕ ಬಿ.ನಾರಾಯಣಸ್ವಾಮಿ ಸೋಮವಾರ ಕಲಬುರಗಿಯಲ್ಲಿ ನಡೆದ ಪರಿವರ್ತನಾ ರ‌್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸುತ್ತಾ ‘ನಾಮರ್ದ್’ ಎಂದು ಕೀಳುಪದ ಬಳಕೆ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಭಾಷಣ ಮಾಡುವ ವೇಳೆ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಣ್ಣಿಸುತ್ತಿದ್ದರು. ಈ ಭರದಲ್ಲಿ ಪ್ರಧಾನಿ ಮೋದಿ ಅವರನ್ನು ನಿಂದಿಸುವುದಕ್ಕಾಗಿ ಹಿಂದಿ ಶಾಯರಿ, ಪದಪುಂಜಗಳನ್ನು ಉಪಯೋಗಿಸಿದ ಅವರು ‘ನಾಮರ್ದ್’ ಎಂದು ಜರೆದರು.

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಗುಣಗಾನ ಮಾಡಿದ ನಾರಾಯಣಸ್ವಾಮಿ, ಸಂಸತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೆ ಅಂಬೇಡ್ಕರ್ ಅವರನ್ನು ನೋಡಿದಂತಾಗುತ್ತದೆ. ಖರ್ಗೆಯವರ ಹಿಂದೆ ದೇಶದ ಜನತೆ ಹಾಗೂ ಅಂಬೇಡ್ಕರ್ ಅವರ ಆಶೀರ್ವಾದವಿದೆ. ಮಲ್ಲಿಕಾರ್ಜುನ ಖರ್ಗೆಯವರು ಒಂದಲ್ಲ ಒಂದು ದಿನ ಪ್ರಧಾನಮಂತ್ರಿಯಾಗುತ್ತಾರೆ ಎಂದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
