ಏಳೆಂಟು ಹೊಸಮುಖಗಳು ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 40 ವರ್ಷದೊಳಗಿನ ಯುವಕರಿಗೆ ಮಂತ್ರಿಗಿರಿ ಕೊಟ್ಟು ನೋಡುವ ಇರಾದೆ ಮೋದಿಯದ್ದಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ನಾಳೆ ನೂತನ ಸಚಿವರ ಪ್ರಮಾಣವಚನ ನಡೆಯುವವರೆಗೂ ಮೋದಿ ಅಂತರಾತ್ಮ ಮತ್ತು ನಿರ್ಧಾರ ತಿಳಿಯುವುದು ಕಷ್ಟಕರವೇ.

ಬೆಂಗಳೂರು(ಸೆ. 01): ಸಿದ್ದರಾಮಯ್ಯ ಸರಕಾರದ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯಂತೂ ಆಗಿದೆ. ಈಗ ಕೇಂದ್ರದ ನರೇಂದ್ರ ಮೋದಿ ಸರಕಾರದ ಪಾಳಿ. ನಾಳೆ ಮೋದಿ ಸಂಪುಟದ ಪುನಾರಚನೆಯಾಗಲಿದೆ. ಈಗಾಗಲೇ ನಾಲ್ವರು ಸಚಿವರು ರಾಜೀನಾಮೆ ನೀಡಿದ್ದಾಗಿದೆ. ಏಳೆಂಟು ಹೊಸಮುಖಗಳು ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 40 ವರ್ಷದೊಳಗಿನ ಯುವಕರಿಗೆ ಮಂತ್ರಿಗಿರಿ ಕೊಟ್ಟು ನೋಡುವ ಇರಾದೆ ಮೋದಿಯದ್ದಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ನಾಳೆ ನೂತನ ಸಚಿವರ ಪ್ರಮಾಣವಚನ ನಡೆಯುವವರೆಗೂ ಮೋದಿ ಅಂತರಾತ್ಮ ಮತ್ತು ನಿರ್ಧಾರ ತಿಳಿಯುವುದು ಕಷ್ಟಕರವೇ.

ಆದರೆ, ಮಾಧ್ಯಮಗಳಲ್ಲಿ ಚಾಲನೆಯಲ್ಲಿರುವ ಸುದ್ದಿ ಮತ್ತು ಮಾಹಿತಿ ಪ್ರಕಾರ ಕರ್ನಾಟಕದ ಪ್ರಹ್ಲಾದ್ ಜೋಷಿ ಮೊದಲಾದವರು ಸಂಪುಟಕ್ಕೆ ಸೇರ್ಪಡೆಯಾಗಬಹುದೆನ್ನಲಾಗಿದೆ.

ರಾಜೀನಾಮೆ ನೀಡಿದ ಸಚಿವರು:
1) ರಾಜೀವ್ ಪ್ರತಾಪ್ ರೂಡಿ
2) ಸಂಜೀವ್ ಕುಮಾರ್ ಬಾಲ್ಯಾನ್
3) ಫಾಗ್ಗನ್ ಸಿಂಗ್ ಕುಲಸ್ತೆ
4) ಮಹೇಂದ್ರನಾಥ್ ಪಾಂಡೆ
5) ಕಾಲ್'ರಾಜ್ ಮಿಶ್ರಾ
6) ಉಮಾ ಭಾರತಿ

ಸಂಭಾವ್ಯ ಸಚಿವರ ಪಟ್ಟಿ 1:
1) ಭೂಪೇಂದರ್ ಯಾದವ್
2) ವಿನಯ್ ಸಹಸ್ರಬುದ್ಧೆ
3) ಪ್ರಹ್ಲಾದ್ ಸಿಂಗ್ ಪಟೇಲ್
4) ಸತ್ಯಪಾಲ್ ಸಿಂಗ್
5) ಓಂ ಮಾಥುರ್
6) ಪ್ರಹ್ಲಾದ್ ಜೋಷಿ

ಸಂಭಾವ್ಯ ಸಚಿವರ ಪಟ್ಟಿ 2:
1) ಅನುರಾಗ್ ಠಾಕೂರ್
2) ಪ್ರತಾಪ್ ಸಿಂಹ
3) ನಿಷಿಕಾಂತ್ ಡುಬೇ
4) ದುಷ್ಯಂತ್ ಸಿಂಗ್ (ರಾಜಸ್ಥಾನ ಸಿಎಂ ವಸುಂಧರಾ ರಾಜೆ ಅವರ ಪುತ್ರ)
5) ವರುಣ್ ಗಾಂಧಿ
6) ಪೂನಂ ಮಹಾಜನ್
7) ಅಭಿಷೇಕ್ ಸಿಂಗ್ (ಛತ್ತೀಸ್'ಗಡ ಸಿಎಂ ರಮಣ್ ಸಿಂಗ್ ಪುತ್ರ)
8) ಹೀನಾ ಗವಿತ್ (ಪ್ರಭಾವಿ ಕಾಂಗ್ರೆಸ್ ಮುಖಂಡರನ್ನು ಚುನಾವಣೆಯಲ್ಲಿ ಸೋಲಿಸಿದ ವೈದ್ಯೆ)

ಮೊದಲ ಸಂಭಾವ್ಯರ ಪಟ್ಟಿಯಲ್ಲಿ ಯುವಕರು ಮತ್ತು ಅನುಭವಿಗಳು ಎರಡೂ ವರ್ಗದವರು ಇದ್ದಾರೆ. ಎರಡನೇ ಪಟ್ಟಿಯನ್ನು ಬಿಜೆಪಿಯಲ್ಲಿರುವ ಯುವ ಸಂಸದರನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗಿದೆ. ವಿವಿಧ ಮಾಧ್ಯಮಗಳಲ್ಲಿ ಒಂದೊಂದು ರೀತಿಯ ಸಂಭಾವ್ಯರ ಪಟ್ಟಿಗಳು ಪ್ರಕಟವಾಗುತ್ತಿವೆ.