ಆನೇಕಲ್(ಸೆ.24): ವಿಧಾನ ಪರಿಷತ್ ಸದಸ್ಯ ಸಿ.ಆರ್​. ಮನೋಹರ್​ ಅವರು ಯಾವುದೇ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್​ ಸ್ಪಷ್ಟನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿ.ಎಚ್.ಎ.ಎಲ್ ಬಡಾವಣೆ ಮಾಡಲು ಸಿ.ಆರ್. ಮನೋಹರ್ ಅವರು ಆನೇಕಲ್​ನ ಅಡಿಗಾರ ಕಲ್ಲಹಳ್ಳಿ ಬಳಿ ಒತ್ತುವರಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ವಿ.ಶಂಕರ್ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.

ರೈತರು ಕೆಲವರಿಗೆ ಮಾರಾಟ ಮಾಡಿದ್ದಾರೆ. ಅದರಲ್ಲಿ ವಿಧಾನ ಪರಿಷತ್ ಸದಸ್ಯ ಮನೋಹರ್ ಅವರು ಖರೀದಿ ಮಾಡಿ ಕಾನೂನು ರೀತಿಯಲ್ಲಿ ಬಡಾವಣೆಗೆ ನಿರ್ಮಿಸಿದ್ದಾರೆ' ಎಂದು ತಿಳಿಸಿದರು.

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅಡಿಗಾರ ಕಲ್ಲಹಳ್ಳಿಯಲ್ಲಿ ಸರ್ವೆ ನಂ 47 ರಲ್ಲಿ ಭೂಮಿ ಒತ್ತುವರಿ ಬಗ್ಗೆ ಇಂದು ಜಿಲ್ಲಾಧಿಕಾರಿಗಳ ವಿ ಶಂಕರ್ ಅವರ ಸಮ್ಮುಖದಲ್ಲಿ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ನಟೇಶ್, ಆನೇಕಲ್ ತಹಶೀಲ್ದಾರ್ ಮತ್ತು ಜಿಲ್ಲಾ ಮೋಜಿಣಿದಾರರು ಅಳತೆ ಕಾರ್ಯ ನಡೆಸಿದ ಬಳಿಕ ಸ್ಪಷ್ಟನೆ ನೀಡಿದ್ದಾರೆ.