ಗೆದ್ದ ಖುಷಿಗೆ ಫುಲ್ ಎಂಜಾಯ್ ಮಾಡಿದ ಶಾಸಕನಿಗೆ ಫುಡ್ ಪಾಯ್ಸನ್

First Published 31, May 2018, 5:25 PM IST
MLA Rajegowda  Admitted To Hospital Over Food Poisoning
Highlights

ಚುನಾವಣಾ ಫಲಿತಾಂಶ ಬಂದಾಗಿನಿಂದ ಬಿಜೆಪಿ ಕೈಗೆ ಸಿಗದಂತೆ ಈಗಲ್ ಟರ್ನ್, ಹೈದ್ರಾಬಾದ್, ಬೆಂಗಳೂರು ಅಂತೆಲ್ಲಾ ರೆಸಾರ್ಟ್ ಸುತ್ತಿದ್ದ ರಾಜೇಗೌಡ ಕ್ಷೇತ್ರಕ್ಕೆ ಬಂದ ಮೇಲೂ ಹತ್ತಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚಿಕ್ಕಮಗಳೂರು[ಮೇ.31]: ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಸಂಭ್ರಮಾಚರಣೆಗೆ ದೇಶಾದ್ಯಂತ ಸುತ್ತಿ ಫುಲ್ ಎಂಜಾಯ್ ಮಾಡಿದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಫುಡ್ ಪಾಯ್ಸನ್‍ನಿಂದ ಆಸ್ಪತ್ರೆ ಸೇರಿದ್ದಾರೆ. 

ಚುನಾವಣಾ ಫಲಿತಾಂಶ ಬಂದಾಗಿನಿಂದ ಬಿಜೆಪಿ ಕೈಗೆ ಸಿಗದಂತೆ ಈಗಲ್ ಟರ್ನ್, ಹೈದ್ರಾಬಾದ್, ಬೆಂಗಳೂರು ಅಂತೆಲ್ಲಾ ರೆಸಾರ್ಟ್ ಸುತ್ತಿದ್ದ ರಾಜೇಗೌಡ ಕ್ಷೇತ್ರಕ್ಕೆ ಬಂದ ಮೇಲೂ ಹತ್ತಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಊಟದಲ್ಲಿ ವ್ಯತ್ಯಾಸವಾಗಿ ಫುಡ್ ಪಾಯ್ಸನ್ ಆಗಿದೆ. ತಕ್ಷಣ ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆಯಲ್ಲಿ ಎರಡು ದಿನದ ಹಿಂದೆಯೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಪ್ರಸ್ತುತ ಅವರ ಆರೋಗ್ಯ ಸುಧಾರಿಸಿದ್ದು ಇಂದು ಸಂಜೆ ಡಿಸ್ಚಾರ್ಜ್ ಆಗಿ ಶೃಂಗೇರಿಗೆ ಹಿಂತಿರುಗುವ ಸಾಧ್ಯತೆಯಿದೆ. 

ಇದನ್ನೂ ಓದಿ :  ರಾಮಲಿಂಗಾರೆಡ್ಡಿಗಿಲ್ಲ ಸಚಿವ ಸ್ಥಾನ ?

ಈ ಸುದ್ದಿಯನ್ನು ಓದಿ : ಉಪ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ : ವಿಪಕ್ಷಗಳ ಕೈ ಮೇಲು

loader