ಉಪ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟ : ವಿಪಕ್ಷಗಳ ಕೈ ಮೇಲು

Byelection results for 4 Lok Sabha and 10 assembly seats
Highlights

 ಮಹಾರಾಷ್ಟ್ರದ ಪಾಲ್ಘರ್ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡಿದೆ. ಉತ್ತರ ಪ್ರದೇಶದ ಕೈರಾನಾದಲ್ಲಿ ರಾಷ್ಟ್ರೀಯ ಲೋಕದಳ, ಮಹಾರಾಷ್ಟ್ರದ ಬಂಡಾರಾ-ಗೋಡಿಯಾದಲ್ಲಿ ಎನ್'ಸಿಪಿ ಜಯದ ಪತಾಕೆ ಹಾರಿಸಿದ್ದು, ನಾಗಲ್ಯಾಂಡ್ ಏಕೈಕ ಕ್ಷೇತ್ರದಲ್ಲಿ ಬಿಜೆಪಿ ಮೈತ್ರಿಕೂಟ ಪಕ್ಷ ಮುನ್ನಡೆ ಸಾಧಿಸಿವೆ.

ನವದೆಹಲಿ[ಮೇ.31]: ಕರ್ನಾಟಕದ ಒಂದು ಮುಂದೂಡಿಕೆ ಕ್ಷೇತ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳ 14 ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಬಹುತೇಕ ಹಿನ್ನಡೆಯಾಗಿದೆ.

4 ಲೋಕಸಭಾ, 10 ವಿಧಾನಸಭಾ ಸ್ಥಾನಗಳಲ್ಲಿ ಕೇಂದ್ರದ ಆಡಳಿದ ಪಕ್ಷ ಬಿಜೆಪಿ ಒಂದು ಲೋಕಸಭೆ ಹಾಗೂ ಒಂದು ವಿಧಾನಸಭೆ ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿದೆ. ಉಳಿದ 12 ವಿರೋಧ ಪಕ್ಷದ ಪಾಲಾಗಿದೆ. ಮಹಾರಾಷ್ಟ್ರದ ಪಾಲ್ಘರ್ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡಿದೆ. ಉತ್ತರ ಪ್ರದೇಶದ ಕೈರಾನಾದಲ್ಲಿ  ರಾಷ್ಟ್ರೀಯ ಲೋಕದಳ, ಮಹಾರಾಷ್ಟ್ರದ ಬಂಡಾರಾ-ಗೋಡಿಯಾದಲ್ಲಿ ಎನ್'ಸಿಪಿ ಜಯದ ಪತಾಕೆ ಹಾರಿಸಿದ್ದು, ನಾಗಲ್ಯಾಂಡ್ ಏಕೈಕ ಕ್ಷೇತ್ರದಲ್ಲಿ ಬಿಜೆಪಿ ಮೈತ್ರಿಕೂಟ ಪಕ್ಷ ಮುನ್ನಡೆ ಸಾಧಿಸಿವೆ.

ವಿಧಾನಸಭೆಯಲ್ಲಿ ಬಿಜೆಪಿಗೆ ಒಂದೇ ಸ್ಥಾನ
ಕರ್ನಾಟಕದ ಒಂದು ಮುಂದೂಡಿಕೆ ವಿಧಾನಸಭಾ ಸ್ಥಾನ ಒಳಗೊಂಡು ವಿವಿಧ ರಾಜ್ಯಗಳ 10 ವಿಧಾನಸಭಾ ಕ್ಷೇತ್ರಗಳ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷ ಉತ್ತರಖಂಡ್'ನ  ತರಾಲಿ ಕ್ಷೇತ್ರವನ್ನು ಹೊರತುಪಡಿಸಿ ಉಳಿದ 9 ಕ್ಷೇತ್ರಗಳಲ್ಲಿ ಪರಾಭವಗೊಂಡಿದೆ. ಕರ್ನಾಟಕದ ರಾಜರಾಜೇಶ್ವರಿ ನಗರ, ಪಂಜಾಬಿನ ಶಾಕೋಟ್, ಮೇಘಾಲಯದ ಅಪಾಟಿ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ.

ಉತ್ತರ ಪ್ರದೇಶ ನೂರ್'ಪುರ್'ನಲ್ಲಿ ಸಮಾಜವಾದಿ ಪಕ್ಷ, ಕೇರಳದ ಚಂಗನೂರ್'ನಲ್ಲಿ ಸಿಪಿಎಂ, ಜಾರ್ಖಂಡ್ 2 ವಿದಾನಸಭಾ ಕ್ಷೇತ್ರಗಳು ಜೆಎಂಎಂ ಜಯಗಳಿಸಿದೆ. ಬಿಹಾರದ ಜೋಕಿಹಾಟ್'ನಲ್ಲಿ ಆರ್'ಜೆಡಿ ಪಶ್ಚಿಮ ಬಂಗಳದ ಮಹೀಸ್ಥಳದಲ್ಲಿ ಆಡಳಿತ ಪಕ್ಷ ಟಿಎಂಸಿ ಗೆಲುವಿನ ನಗೆ ಬೀರಿದೆ.   

loader