ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕಲಹ ಸದ್ಯಕ್ಕೆ ತಣ್ಣಗಾಗಿದ್ದು ಇದೇ ವೇಳೆ ಲಕ್ಷ್ಮೀ ಹೆಬ್ಬಾಳಕರ್ ಸ್ವಾಭಿಮಾನಕ್ಕೆ ಧಕ್ಕೆಯಾದಲ್ಲಿ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬಾಗಲಕೋಟೆ :  ಸದ್ಯ ಜಾರಕಿಹೊಳಿ ಸಹೋದರರ ಜೊತೆಗಿನ ಕಲಹ ತಣ್ಣಗಾದಂತೆ ಕಂದು ಬಂದಿದ್ದು ಇದೇ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮ್ಮ ಕ್ಷೇತ್ರದ ವಿಚಾರಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ. ಅದೊಂದು ಕೆಟ್ಟ ಘಟನೆ ಎಂದು ಮರೆತು ಬಿಡಿ ಎಂದು ಸಮಾಜಕ್ಕೆ‌ ಮನವಿ ಮಾಡುತ್ತೇನೆ ಎಂದಿದ್ದಾರೆ. 

ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಮಾತ್ರ ಸಹಿಸುವುದಿಲ್ಲ, ಅನ್ಯಾಯ ಮಾಡುವುದು ಎಷ್ಟು ಕೆಟ್ಟದ್ದೋ , ಅನ್ಯಾಯವನ್ನು ಸಹಿಸುವುದು ಕೂಡ ಅಷ್ಟೆ ಕೆಟ್ಟದ್ದು ಎಂದು ಕೂಡಲಸಂಗಮದಲ್ಲಿ ನಡೆದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ.

ಕಲಿಯುಗದಲ್ಲಿ ಚುನಾವಣೆಗಳೆ ಯುದ್ಧಗಳಾಗಿವೆ ಎಂದು ಜಾರಕಿಹೊಳಿ ಬ್ರದರ್ಸ್ ಹಾಗೂ ತಮ್ಮ ನಡುವೆ ನಡೆದ ಘಟನೆ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. 

ಬೆಳಗಾವಿಯ ಪಿಎಲ್ ಡಿ ಬ್ಯಾಂಕ್ ಚುನಾವಣೆ ಸಂಬಂಧ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ತೀವ್ರ ಕಲಹ ಏರ್ಪಟ್ಟು ಬಳಿಕ ಸಂಧಾನದ ಮೂಲಕ ಬಗೆಹರಿಸಲಾಗಿತ್ತು.