ಇವರನ್ನು ಕೊಲ್ಲಿಸುತ್ತಿದ್ದೆ ಎಂದು ವಿವಾದಕ್ಕೆ ಸಿಲುಕಿದ ಶಾಸಕ ಯತ್ನಾಳ್

First Published 27, Jul 2018, 9:02 AM IST
MLA Basavana Gowda Patil Yatnal New Controversy Statement
Highlights

ತಾವು ಗೃಹಮಂತ್ರಿ ಅಥವಾ ಮುಖ್ಯಮಂತ್ರಿಯಾಗಿದ್ದರೆ ಇಂತಹವರನ್ನು ಗುಂಡಿಟ್ಟು ಕೊಲ್ಲಿಸುತ್ತಿದ್ದೆ ಎಂದು ಹೇಳುವ ಮೂಲಕ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್  ಹೊಸ ವಿವಾದ ಸೃಷ್ಟಿಸಿದ್ದಾರೆ.

ವಿಜಯಪುರ: ಬುರ್ಖಾ ಧರಿಸಿದವರು, ಗಡ್ಡಧಾರಿಗಳು ನನ್ನ ಕಚೇರಿಯತ್ತ ಸುಳಿಯಬೇಡಿ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದ  ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ನಾನೇನಾದರೂ ಗೃಹಮಂತ್ರಿಯಾಗಿದ್ದರೆ ಬುದ್ಧಿಜೀವಿಗಳನ್ನು ನಿಲ್ಲಿಸಿ ಗುಂಡು ಹಾರಿಸುವಂತೆ ಹೇಳುತ್ತಿದ್ದೆ ಎನ್ನುವ ಮೂಲಕ ಮತ್ತೊಂದು ವಿವಾದಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. 

ಗುರುವಾರ ನಡೆದ 19 ನೇ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ದೇಶದ ಸೈನಿಕರ ಮೇಲೆ ಕಲ್ಲು ತೂರುವ ದೇಶದ್ರೋಹಿಗಳನ್ನು ಬೆಂಬಲಿಸುವ ಬುದ್ಧಿಜೀವಿಗಳಿಂದ ದೇಶ ಹಾಳಾಗಿದೆ. 

ನಮ್ಮ ದೇಶದ ಬುದ್ಧಿಜೀವಿಗಳು ದೇಶದ್ರೋಹಿಗಳಿಗಿಂತಲೂ ಅತ್ಯಂತ ಅಪಾಯಕಾರಿಯಾಗಿದ್ದಾರೆ. ನಾನೇನಾದರೂ ಗೃಹ ಮಂತ್ರಿಯಾಗಿದ್ದರೆ ಇಂಥವರನ್ನು ನಿಲ್ಲಿಸಿ ಗುಂಡು ಹಾರಿಸುವಂತೆ ಹೇಳುತ್ತಿದ್ದೆ ಎಂದು ಹೇಳಿದರು.

loader