ತಮ್ಮ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಸುಳ್ಳು ಆರೋಪಕ್ಕೆ  ನ್ಯಾಯಾಲಯದ ಮೂಲಕ ಉತ್ತರ ಪಡೆಯಲು ನಿರ್ಧರಿಸಿದ್ದೇನೆ. ಆ ಕಾರಣದಿಂದ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿರುವ ಅವರು, ವಿದೇಶಾಂಗ ಇಲಾಖೆಯಲ್ಲಿ ಸಚಿವನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕೃತಜ್ಞನಾಗಿರುವುದಾಗಿ  ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. 

ನವದೆಹಲಿ[ಅ.17]: ಪತ್ರಕರ್ತೆಯ ಮೇಲೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ಎಂ.ಜೆ.ಅಕ್ಬರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೋದಿ ಸಂಪುಟಕ್ಕೂ ತಟ್ಟಿದ #MeToo: ಯೂ ಟೂ ಮಿನಿಸ್ಟರ್?

ತಮ್ಮ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಸುಳ್ಳು ಆರೋಪಕ್ಕೆ ನ್ಯಾಯಾಲಯದ ಮೂಲಕ ಉತ್ತರ ಪಡೆಯಲು ನಿರ್ಧರಿಸಿದ್ದೇನೆ. ಆ ಕಾರಣದಿಂದ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿರುವ ಅವರು, ವಿದೇಶಾಂಗ ಇಲಾಖೆಯಲ್ಲಿ ಸಚಿವನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕೃತಜ್ಞನಾಗಿರುವುದಾಗಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

#MeToo ಆರೋಪ: ಅಕ್ಬರ್‌ ಕೇಸಿನ ಬಗ್ಗೆ ಮೋದಿ ಮೌನ ಮುರಿಯಲಿ

ಕೆಲವು ದಿನಗಳ ಹಿಂದೆ ಮಹಿಳಾ ಪತ್ರಕರ್ತೆಯೊಬ್ಬರು, ದಿ ಟೆಲಿಗ್ರಾಫ್ ಪತ್ರಿಕೆಯ ಸಂಪಾದಕರಾಗಿದ್ದ ಎಂ.ಜೆ. ಅಕ್ಬರ್ ಅವರು ವೃತ್ತಿ ನಿರ್ವಹಿಸುವ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮೀಟೂ ಅಭಿಯಾನದ ಮೂಲಕ ಆರೋಪಿಸಿದ್ದರು. ಸಂತ್ರಸ್ತ ಮಹಿಳೆಗೆ ಪತ್ರಕರ್ತೆಯರು ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೆ ತಮ್ಮ ವಿರುದ್ಧ ಆರೋಪ ಮಾಡಿರುವ 15 ಮಹಿಳೆಯರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದು ತನ್ನ ಪರ ವಕಾಲತ್ತು ನಡೆಸಲು 97 ವಕೀಲರ ನೇಮಕಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

’ಮೀ ಟೂ’ ಅಭಿಯಾನದಲ್ಲಿ ಅಮಿತ್ ಶಾ ಎಂಟ್ರಿ

Scroll to load tweet…