ರಾಜ್ಯ ಸರ್ಕಾರ ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರವೊಂದು ರಾಜ್ಯದ ಮಕ್ಕಳ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಪುಸ್ತಕ ಪರಿಷ್ಕರಣೆಯ ಯಡವಟ್ಟು ಇದೀಗ ಬಯಲಾಗಿದ್ದು ಸರಿ ಮಾಡಲು ಹೊರಟವರೇ ಹತ್ತಾರು ತಪ್ಪುಗಳನ್ನು ಮಾಡಿದ್ದಾರೆ. ಈ ತಪ್ಪುಗಳು ಆಗೋಕ್ಕೆ ಕಾರಣ ಮತ್ಯಾರು ಅಲ್ಲ , ಪರಿಷ್ಕರಣೆ ಸಮಿತಿಯ ಸರ್ವಾಧ್ಯಕ್ಷರಾದ ಡಾ.ಬರಗೂರು ರಾಮಚಂದ್ರಪ್ಪ ಅವರು.. ಶಾಕ್​ ಆಗಬೇಡಿ ಈ ಸ್ಟೋರಿ ನೋಡಿ.

ಬೆಂಗಳೂರು(ಜು. 12): ರಾಜ್ಯ ಸರ್ಕಾರ ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರವೊಂದು ರಾಜ್ಯದ ಮಕ್ಕಳ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಪುಸ್ತಕ ಪರಿಷ್ಕರಣೆಯ ಯಡವಟ್ಟು ಇದೀಗ ಬಯಲಾಗಿದ್ದು, ಸರಿ ಮಾಡಲು ಹೊರಟವರೇ ಹತ್ತಾರು ತಪ್ಪುಗಳನ್ನು ಮಾಡಿದ್ದಾರೆ. ಈ ತಪ್ಪುಗಳು ಆಗೋಕ್ಕೆ ಕಾರಣ ಮತ್ಯಾರು ಅಲ್ಲ , ಪರಿಷ್ಕರಣೆ ಸಮಿತಿಯ ಸರ್ವಾಧ್ಯಕ್ಷರಾದ ಡಾ.ಬರಗೂರು ರಾಮಚಂದ್ರಪ್ಪ ಅವರು.. ಶಾಕ್​ ಆಗಬೇಡಿ ಈ ಸ್ಟೋರಿ ನೋಡಿ.

ಒಂದೇ ವರ್ಷ ಬಳಕೆಗೆ ಬರುವ ಪಠ್ಯ ಪುಸ್ತಕಕ್ಕೆ 144 ಕೋಟಿ ವೆಚ್ಚ

ರಾಜ್ಯ ಸರ್ಕಾರ ತರಾತುರಿಯಲ್ಲಿ ನಡೆಸಿದ ಪಠ್ಯಪುಸ್ತಕ ಪರಿಷ್ಕರಣೆ ಇದೀಗ ಹಲವು ದೋಷಗಳಿಂದಲೇ ವಿವಾದಕ್ಕೆ ಸಿಲುಕಿದೆ. ಸರ್ಕಾರ ಈ ವರ್ಷ 1 ರಿಂದ 10 ನೇ ತರಗತಿವರೆಗಿನ ಎಲ್ಲ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿತ್ತು. ತಪ್ಪುಗಳನ್ನು ತಿದ್ದುವುದಕ್ಕೆಂದೇ ಮಾಡಿದ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಇದೀಗ ಮತ್ತಷ್ಟು ತಪ್ಪುಗಳಾಗಿವೆ. ಇಷ್ಟು ತಪ್ಪುಗಳು ಆಗೋಕ್ಕೆ ಮುಖ್ಯ ಕಾರಣ, ಬೇರಾರು ಅಲ್ಲ ಪರಿಷ್ಕರಣಾ ಸಮಿತಿಯ ಸರ್ವಾಧ್ಯಕ್ಷರಾದ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪನವರು.

ಇನ್ನು, ಈಗಾಗಲೇ ಜಾರಿ ಬಂದಿರುವ ತಪ್ಪು ತಪ್ಪಾದ ಪುಸ್ತಕಗಳ ಬಳಕೆ ಕೇವಲ ಒಂದು ವರ್ಷ. ಮುಂದಿನ ವರ್ಷದಿಂದ ಕೇಂದ್ರ ಸರ್ಕಾರದ ಸಿಬಿಎಸ್​ಸಿ ಪುಸ್ತಕಗಳು ಜಾರಿಗೆ ಬರಲಿಲ್ಲವೆ. ಹೀಗೆಂದು ಒಂದು ವರ್ಷದ ಪುಸ್ತಕಗಳಿಗೆ ಸರ್ಕಾರ ಖರ್ಚು ಮಾಡಿದು ಬರೋಬ್ಬರಿ 144 ಕೋಟಿ. ಇನ್ನು ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿರುವ ಬರಗೂರು ರಾಮಚಂದ್ರಪ್ಪ ಅವರು ಹಾಕಿದ ಕೆಲವೊಂದು ಷರತ್ತುಗಳೇ ಇವತ್ತು ಪುಸ್ತಕದಲ್ಲಿ ಎಡವಟ್ಟುಗಳು ಆಗುವುದಕ್ಕೆ ಕಾರಣ. 2015 ಮೇ ತಿಂಗಳಲ್ಲಿ ಪರಿಷ್ಕರಣಾ ಸಮಿತಿಗೆ ಸರ್ವಾಧ್ಯಕ್ಷರಾದ ಬಂದ ಬರಗೂರು ರಾಮಚಂದ್ರಪ್ಪ, ಮೊದಲಿಗೆ ಸರ್ಕಾರದ ಎಲ್ಲ ಷರತ್ತುಗಳನ್ನ ಒಪ್ಪಿಕೊಂಡಿದ್ರು, ನಂತರ ತಮ್ಮದೆ ಷರತ್ತುಗಳನ್ನು ಹಾಕಲು ಪ್ರಾರಂಭಿಸಿದರು.

2015 ಮೇ ನಂತರ ಬರಗೂರು ಷರತ್ತುಗಳು:
ಶಿಕ್ಷಣ ಇಲಾಖೆ ಅಧಿಕಾರಿಗಳು 2017-18 ನೇ ಸಾಲಿನಲ್ಲಿ ಪರಿಷ್ಕರಣಾ ಪುಸ್ತಕಗಳನ್ನ ಕಾರ್ಯರೂಪಕ್ಕೆ ಬರಲ್ಲು ಸಾಧ್ಯವಿಲ್ಲ ಅಂತಾ ವರದಿ ನೀಡಿದ್ರು. ಆದ್ರೆ, ಬರಗೂರು ರಾಮಚಂದ್ರಪ್ಪ , ತಮ್ಮ ಸಮಿತಿ ಮಾಡಿದ ಪರಿಷ್ಕರಣಾ ಪುಸ್ತಕಗಳು ಇದೇ ವರ್ಷ ಜಾರಿ ಬರಬೇಕು ಎಂದು ಆದೇಶ ಮಾಡಿದ್ರು.. ಅಧಿಕಾರಿಗಳು ಬರಗೂರು ಅವರ ಸಂಪರ್ಕಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳೋಹಾಗಿಲ್ಲ. ಪರಿಷ್ಕರಣಾ ಸಮಿತಿ ತಯಾರಿಸಿದ ನೂತನ ಪುಸ್ತಕಗಳನ್ನ ಅಧಿಕಾರಿಗಳೇ ಆಗಲಿ, ಸರ್ಕಾರವೇ ಆಗಲಿ ಮರು ಪರಿಶೀಲನೆಯನ್ನ ಮಾಡುವಂತ್ತಿಲ್ಲ ಎಂಬ ಷರತ್ತು ಹಾಕಿದ್ದರು. ಅಷ್ಟೇ ಅಲ್ಲ ಸರ್ಕಾರಕ್ಕೂ ಪರಿಷ್ಕರಣಾ ಸಮಿತಿ ಯಾವುದೇ ವರದಿ ಸಲ್ಲಿಸುವುದಿಲ್ಲ ಅಂತಾ ಹೇಳಿದ್ದರು.

ಇವಿಷ್ಟು ಬರಗೂರು ರಾಮಚಂದ್ರಪ್ಪ ಅವರ ಕಾರುಬಾರ್​. ಇನ್ನು, ಇವರು ತಯಾರಿಸಿದ ಪುಸ್ತಕದಲ್ಲಿ ಇರುವ ಖರಾಮತ್​'ಗಳು ಇಲ್ಲಿವೆ:

1) ಬಸವಣ್ಣನವರಿಗೆ ಉಪನಯನವಾಗಿಲ್ಲ:
ಆರನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬಸವಣ್ಣನವರಿಗೆ ಉಪನಯನ ಸಂಸ್ಕಾರ ಒಪ್ಪದೆ ಲಿಂಗದೀಕ್ಷೆ ಪಡೆದರು ಎಂದು ಬರೆಯಲಾಗಿದೆ. ಆದರೆ 7ನೇ ತರಗತಿಯ ಕನ್ನಡ ಪುಸ್ತಕದಲ್ಲೂ ಬಸವಣ್ಣನವರ ಪಾಠವಿದೆ. ಅಲ್ಲಿ, ಬಸವಣ್ಣನಿಗೆ ಏಳು ಅಥವಾ ಎಂಟನೇ ವಯಸ್ಸಿನಲ್ಲಿ ಉಪನಯನವಾಗಿತ್ತು, ಮುಂದೆ 16 ನೇ ವಯಸ್ಸಿನಲ್ಲಿ ಲಿಂಗಧಾರಣೆ ಮಾಡಿಕೊಂಡ್ರು ಅಂತಾ ಉಲ್ಲೇಖ ಮಾಡಲಾಗಿದೆ. ಒಂದೇ ಸಮಿತಿ ನೀಡಿದ ಎರಡು ರೀತಿಯ ಮಾಹಿತಿ ಇದು.

2) ಅಮೆರಿಕಾ ಸೈನ್ಯದ ಸಮವಸ್ತ್ರ, ಭಾರತದ ದೇಶಭಕ್ತಿ ಗೀತೆ:
7 ನೇ ತರಗತಿಯ ಹಿಂದಿ ಪುಸ್ತಕದಲ್ಲಿ ದೇಶಭಕ್ತಿ ಗೀತೆಯೊಂದನ್ನು ಮುದ್ರಿಸಲಾಗಿದೆ. ಪದ್ಯವೇನೋ ಚೆನ್ನಾಗಿದೆ. ಆದ್ರೆ ಅದರಲ್ಲಿರುವ ಚಿತ್ರವು ಅಮೆರಿಕ ಸೈನ್ಯದ ಸಮವಸ್ತ್ರ ಧರಿಸಿರುವ ಬಾಲಕನದ್ದಾಗಿದೆ.

3) 7 ನೇ ಕ್ಲಾಸ್​ ಮಕ್ಕಳಿಗೆ ರೊಮ್ಯಾನ್ಸ್ ಪಾಠ:
7 ನೇ ತರಗತಿ ಕನ್ನಡ ಪುಸ್ತಕವೊಂದರಲ್ಲಿ ಬರುವ "ನನ್ನ ಅಯ್ಯ" ಎಂಬ ಪಾಠದಲ್ಲಿ , ದೇಹದಾಚೆಗಿನ ಮಿಡಿತಗಳು, ರೊಮ್ಯಾಂಟಿಕ್​ ಕಲ್ಪನೆಗಳು ಇಂತಹ ಪದಗಳನ್ನ ಬಳಸಲಾಗಿದೆ. ಮಕ್ಕಳಿಗೆ ಯಾವುದು ಹೇಳಬೇಕು ಯಾವುದು ಹೇಳಬಾರದು ಎಂಬ ಕನಿಷ್ಠ ಪರಿಜ್ಞಾನ ಕೂಡಾ ಇಲ್ಲದಂತ್ತಿದೆ. ಅಷ್ಟೇ ಅಲ್ಲ ಈ ಪಾಠದ ಕೊನೆಯಲ್ಲಿ ಲೇಖಕಿಯ ತಂದೆಯ ಹೆಸರೇನು ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ. ಸರಸ್ವತಿ ಯಾರು? ಅವರೇನು ಸ್ವಾತಂತ್ರ್ಯ ಹೋರಾಟಗಾರರೇ? ಅಥವಾ ಈ ಹೆಸರಿನಿಂದ ಮಕ್ಕಳಿಗೆ ಮುಂದೆ ಸಹಾಯವಾಗತ್ತಾ? ಎಂಬ ಪ್ರಶ್ನೆ ಎಲ್ಲರನೂ ಕಾಡುತ್ತಿದೆ.

4) ದಲಿತರ ಹಾಗೂ ಬ್ರಾಹ್ಮಣರ ನಡುವೆ ಹುಳಿ ಹಿಂಡಿದ ಬರಗೂರು:
7 ನೇ ತರಗತಿ ಕನ್ನಡ ಪುಸ್ತಕದಲ್ಲಿ ಟಿ.ಯಲ್ಲಪ್ಪ ಅವರು ಬರೆದಿರುವ "ಅವರು ಮತ್ತು ನಾವು" ಎಂಬ ಕವನ ಎರಡು ಜಾತಿಗಳ ಬೀಜ ಬಿತ್ತುವಂತಿದೆ. ದಲಿತರು ತಿನ್ನೋದಕ್ಕೆ ಅನ್ನ ಕೇಳಿದ್ರು, ಬ್ರಾಹ್ಮಣರು ಹುಳ ಬಿದ್ದ ಅಕ್ಕಿ ಕೊಟ್ಟರು. ನಾವು ಕುಡಿಯಲು ನೀರು ಕೇಳಿದೆವು ಅವರು ಆಕಾಶದಲ್ಲಿ ನಿಂತು ಪಾತಾಳಕ್ಕೆ ನೀರು ಸುರಿದರು, ಸುರಿದ ನೀರಲ್ಲಿ ನಾವು ದಣಿವಾರಿಸಿಕೊಂಡು ಉಳಿದ ನೀರಲ್ಲಿ ಕಣ್ಣೀರ ತೊಳೆದುಕೊಂಡೆವು. ಇಂದು ಅವರ ಬಾಯಲ್ಲಿ ನೀರು ಬಿಡುವವರಿಲ್ಲ ಎಂದು ಬರೆಯಲಾಗಿದೆ. ಇದು ದಲಿತರ ಮತ್ತು ಬ್ರಾಹ್ಮಣರ ನಡುವೆ ವೈಷಮ್ಯಕ್ಕೆ ಗುರಿಯಾಗಿದು, ಮಕ್ಕಳಲ್ಲಿ ಜಾತಿಯ ಬೀಜ ಬಿತ್ತಿದ್ದಾರೆ.

5) ಒಂದೇ ಪುಸ್ತಕದಲ್ಲಿ 31 ತಪ್ಪು ಪದಗಳು ಮುದ್ರಣ:
ಹತ್ತನೇ ತರಗತಿ ಕನ್ನಡ ದ್ವಿತೀಯ ಭಾಷೆ ಪುಸ್ತಕದಲ್ಲಿ ಒಟ್ಟು 114 ಪದಗಳು ತಪ್ಪಾಗಿ ಮುದ್ರಣವಾಗಿವೆ. ದಾಳಿಗೆ ಎಂಬ ಪದವನ್ನ ಧಾಳಿಗೆ, ಚದರ ಎಂಬ ಪದವನ್ನ ಚದುರ ಎಂದು ಉಲ್ಲೇಖಿಸಲಾಗಿದೆ.

ಪಠ್ಯಪುಸ್ತಕ ಪರಿಷ್ಕರಣೆ ಮತ್ತು ಮುದ್ರಣಕ್ಕೆ ಬರಗೂರು ಅವರು ಟೈಮ್ ನೀಡದೇ ಇದ್ದ ಕಾರಣ ಪರಿಷ್ಕರಣೆ ವೇಳೆ ಸಿಕ್ಕಾಪಟ್ಟೆ ಲೋಪದೋಷಗಳಾಗಿವೆ. ಅದರಲ್ಲೂ ಪ್ರಮುಖವಾಗಿ 8 ರಿಂದ 10 ನೇ ತರಗತಿವರೆಗಿನ ಪುಸ್ತಕಗಳಲ್ಲೇ ದೋಷಗಳಾಗಿದ್ದು ಮಕ್ಕಳಿಗೆ ತಪ್ಪು ತಪ್ಪಾಗಿ ಪಾಠ ಹೇಳಿಕೊಡಬೇಕಾಗಿದೆ. ಹಲವು ಪುಸ್ತಕಗಳಲ್ಲಿ ಪುಟಗಳೇ ನಾಪತ್ತೆಯಾಗಿದ್ರೆ, ಇನ್ನಷ್ಟು ಪ್ರಿಂಟಿಂಗ್ ದೋಷಗಳಿಗೆ ಯಾರ ಹೊಣೆ ಎನ್ನುವುದೇ ಗುರುತರ ಆರೋಪ.

ಯಾವ್ಯಾವ ಪುಸ್ತಕಗಳಲ್ಲಿ ಏನೇನು ಲೋಪ..?
* 2016 ರ ರಿಯೋ ಓಲಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಗೆದ್ದಿದ್ದು ಬೆಳ್ಳಿ ಪದಕ
* ಆದರೆ 10 ನೇ ತರಗತಿ ಪುಸ್ತಕದಲ್ಲಿ ಪಿ,.ವಿ.ಸಿಂಧು ಗೆದ್ದಿದ್ದು ಕಂಚಿನ ಪದಕ ಎಂಬ ತಪ್ಪು ಮಾಹಿತಿ
* 10 ನೇ ತರಗತಿ ಇಂಗ್ಲೀಷ್ ಪುಸ್ತಕದಲ್ಲಿ 20 ಪುಟಗಳನ್ನು ತಲೆ ಕೆಳಗಾಗಿ ಮುದ್ರಣ
* 8 ನೇ ತರಗತಿ ಕನ್ನಡ ಪುಸ್ತಕದಲ್ಲಿ 40 ಕ್ಕೂ ಹೆಚ್ಚು ಪುಟಗಳೇ ಗಾಯಬ್ ಆಗಿವೆ.
* ಹಲವು ಕಡೆಗಳಲ್ಲಿ ಕಾಗುಣಿತ ಮತ್ತು ಮುದ್ರಣದಲ್ಲಿ ಅಸಂಖ್ಯ ತಪ್ಪು

ಇಷ್ಟೆಲ್ಲ ತಪ್ಪುಗಳು, ಮುದ್ರಣ ದೋಷಕ್ಕೆ ಸರ್ಕಾರದ ತರಾತುರಿಯ ನಿರ್ಧಾರ ಮತ್ತು ಒತ್ತಡವೇ ಕಾರಣ ಎನ್ನಲಾಗುತ್ತಿದೆ. ಫೆಬ್ರವರಿ ಅಂತ್ಯದ ವೇಳೆಗೆ ಪರಿಷ್ಕೃತ ಪುಸ್ತಕಗಳು ಮುದ್ರಣಕ್ಕೆ ಹೋಗಿವೆ ಇದಕ್ಕೆಲ್ಲ ಬರಗೂರು ರಾಮಚಂದ್ರಪ್ಪನವರ ಷರತ್ತು ಕಾರಣ . ಇನ್ನು ಹಿಂದಿನ ಬಿಜೆಪಿ ಸರ್ಕಾರ ತಂದಿದ್ದ ಪುಸ್ತಕಗಳಲ್ಲಿ ಕೇಸರೀಕರಣವಿದೆ ಎಂಬ ಆರೋಪಗಳಿತ್ತು. ಇದೇ ನೆಪವನ್ನೊಡ್ಡಿ ಸರ್ಕಾರ ಪುಸ್ತಕ ಪರಿಷ್ಕರಣೆ ಮಾಡಿದೆ. ಆದರೆ ಮುದ್ರಣದ ಒತ್ತಡದ ಸಂದರ್ಭದಲ್ಲಿ ಸರಿಯಾದ ಗಮನ ಹರಿಸದೇ ಸಾಕಷ್ಟು ದೋಷಗಳಾಗಿವೆ.

ಪಠ್ಯ ಪುಸ್ತಕ ಪರಿಷ್ಕರಣೆ ಸಭೆಗೆ ಹಾಜರಾದ ಮೊದಲ ಮುಖ್ಯಮಂತ್ರಿ:
ಇನ್ನು, ಬರಗೂರು ಅವರು ಹೇಳಿದ ಹಾಗೇ ಅಧಿಕಾರಿಗಳು ಮಾತುಕೇಳಬೇಕು ಅಂತಾಲೇ ಬರಗೂರು ಅವರು ತಮ್ಮ ಪ್ರತಿ ಸಭೆಯಲ್ಲೂ ಮುಖ್ಯಮಂತ್ರಿಯವರನ್ನ ಆಹ್ವಾನಿಸುತ್ತಿದ್ರು. ಇಲ್ಲಿವರೆಗೂ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗಳ ಸಭೆಗೆ ಯಾವುದೆ ಮುಖ್ಯ ಮಂತ್ರಿಗಳು ಬಂದಿರುವ ಉದಾಹರಣೆಗಳು ಇಲ್ಲ. ಆದ್ರೆ ಸಿಎಂ ಸಿದ್ಧರಾಮಯ್ಯನವರು ಪ್ರತಿ ಸಭೆಯಲ್ಲೂ ಪಾಲ್ಗೊಳುತ್ತಿದ್ರು.

ಒಟ್ಟಾರೆ, ಸಮಿತಿ ಸರ್ವಾಧ್ಯಕ್ಷ ಬರಗೂರು ರಾಮಚಂದ್ರಪ್ಪನವರು ಮಕ್ಕಳ ಬಾಳಲಿ ಆಟವಾಡಿರುವುದು ಸಾಬೀತಾಗಿದೆ. 144 ಕೋಟಿ ವೆಚ್ಚದಲ್ಲಿ ಮುದ್ರಣವಾದ 6 ಕೋಟಿ ಪುಸ್ತಕಗಳಲ್ಲಿ ಕೇವಲ 3 ಕೋಟಿ ಪುಸ್ತಕಗಳು ಹಂಚಿಕೆಯಾಗಿವೆ. ಕೆಲವುಡೆ ಇದೂವರೆಗೂ ಪುಸ್ತಕ ತಲುಪ್ಪಿಲ್ಲ. ಇಷ್ಟೆಲ್ಲ ತಪ್ಪುಗಳು ಆದರೂ ಶಿಕ್ಷಣ ಸಚಿವರು ಯಾಕೆ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ.