ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನೂರು ಗ್ರಾಮದ ಸಂಬಂಧಿಯೊಬ್ಬರ ಮನೆಗೆ ನಿನ್ನೆ ರಾತ್ರಿ ತಲುಪಿದ್ದು, ವಾರ್ಡನ್ ಕಿರಿಕಿರಿಯಿಂದಾಗಿ ಹಾಸ್ಟೆಲ್ ತೊರೆದಿದ್ದಾಗಿ ಬಾಲಕಿಯರು ಹೇಳಿದ್ದಾರೆ.

ಮೈಸೂರು (ಡಿ.24): ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿನಿಯರು ಪತ್ತೆಯಾಗಿದ್ದಾರೆ.

Add Asianetnews Kannada as a Preferred SourcegooglePreferred

ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನೂರು ಗ್ರಾಮದ ಸಂಬಂಧಿಯೊಬ್ಬರ ಮನೆಗೆ ನಿನ್ನೆ ರಾತ್ರಿ ತಲುಪಿದ್ದು, ವಾರ್ಡನ್ ಕಿರಿಕಿರಿಯಿಂದಾಗಿ ಹಾಸ್ಟೆಲ್ ತೊರೆದಿದ್ದಾಗಿ ಬಾಲಕಿಯರು ಹೇಳಿದ್ದಾರೆ.

ಪಿರಿಯಾಪಟ್ಟಣದ ಸಾರ್ವಜನಿಕ ವಿದ್ಯಾರ್ಥಿ ನಿಲಯದಿಂದ ಡಿಸೆಂಬರ್‌ 22 ರಂದು ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ. 10ನೇ ತರಗತಿ ಓದುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದರು. ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿಯರು ಸಂಜೆಯಾದರೂ ವಾಪಸ್ ಬಂದಿಲ್ಲ ಎಂದು ಹಾಸ್ಟೆಲ್ ವಾರ್ಡನ್ ಮಹದೇವಮ್ಮ ಪಟ್ಟಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.