ಶಿವಣ್ಣ, ಚಿಕ್ಕಣ್ಣ, ಬೀರಲಿಂಗಪ್ಪ, ಚೇತನ್, ಕೀರ್ತನ ಕನಕದಾಸ ಎಂಬುವವರೆ ಈ ಕೃತ್ಯ ಎಸಗಿದ ಕಿಡಿಗೇಡಿಗಳು. ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರೂ, ಇದುವರೆಗೂ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತುರುವೇಕೆರೆ(ನ.18): ಕಿಡಿಗೇಡಿಗಳು ಅಂಗನವಾಡಿ ಮಕ್ಕಳಿಗೆ ಚಾಕೊಲೇಟ್ ಆಸೆ ತೋರಿಸಿ ಬೀಡಿ ಸೇದಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಕೆ. ಮೇಲನಹಳ್ಳಿಯಲ್ಲಿನ ಅಂಗನವಾಡಿಯಲ್ಲಿ ಈ ಘಟನೆ ನಡೆದಿದ್ದು, ಮಕ್ಕಳು ಬೀಡಿ ಸೇದುವುದನ್ನು ಮೊಬೈಲ್'ನಲ್ಲಿ ರೆಕಾರ್ಡ್ ಮಾಡಿ ಮಕ್ಕಳಿಗೆ ಕಿರಿಕಿರಿ ನೀಡುತ್ತಿದ್ದರು.

ಶಿವಣ್ಣ, ಚಿಕ್ಕಣ್ಣ, ಬೀರಲಿಂಗಪ್ಪ, ಚೇತನ್, ಕೀರ್ತನ ಕನಕದಾಸ ಎಂಬುವವರೆ ಈ ಕೃತ್ಯ ಎಸಗಿದ ಕಿಡಿಗೇಡಿಗಳು. ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರೂ, ಇದುವರೆಗೂ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ದೂರು ನೀಡಿದ ಬಳಿಕವೂ ಮಕ್ಕಳಿಗೆ ಕಿಡಿಗೇಡಿಗಳು ಬೀಡಿ ಸೇದಿಸುವುದನ್ನು ಮುಂದುವರೆಸಿದ್ದಾರೆ ಎನ್ನಲಾಗುತ್ತಿದೆ.