ಮಹಾರಾಷ್ಟ್ರದ ಲಾತೂರು ಜಿಲ್ಲೆಯ ಉದಗೀರ ಮೂಲದ ಯುವಕರು ಮಾರ್ಕೆಟ್ ಪೊಲೀಸರ ಅತಿಥಿಯಾಗಿದ್ದಾರೆ.
ಮಹಾರಾಷ್ಟ್ರ(ಆ.19): ಮಹಾರಾಷ್ಟ್ರದ ಲಾತೂರು ಜಿಲ್ಲೆಯ ಉದಗೀರ ಮೂಲದ ಯುವಕರು ಮಾರ್ಕೆಟ್ ಪೊಲೀಸರ ಅತಿಥಿಯಾಗಿದ್ದಾರೆ.
ಕರ್ನಾಟಕ ಮೂಲದ ಬಾಲಕರನ್ನು ಹೆದರಿಸಲು ಮಹಾರಾಷ್ಟ್ರ ಮೂಲದ ಅಪ್ರಾಪ್ತ ಬಾಲಕರು ಏರ್ ಗನ್ ತಂದಿದ್ದರು. ಆದರೆ ಬಾಲಕರ ಕೈಯ್ಯಲ್ಲಿ ದ್ದ ಗನ್ ನೋಡಿ ನಗರದ ಅಂಬೇಡ್ಕರ್ ವೃತದಲ್ಲಿ ವ್ಯಾಪಾರಸ್ಥರು ಮತ್ತು ಸ್ಥಳೀಯರು ಕೆಲ ಕಾಲ ಬೆಚ್ಚಿಬಿದ್ದಿದ್ದಾರೆ.
ಬಳಿಕ ಸ್ಥಳಕ್ಕೆ ಬಂದ ಮಾರ್ಕೆಟ್ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು ಅಲ್ಲದೇ ಮಹಾರಾಷ್ಟ್ರ ಮೂಲದ ಇಬ್ಬರು ಅಪ್ರಾಪ್ತ ಬಾಲಕರನ್ನ ಮಾರ್ಕೆಟ್ ಪೊಲೀಸರ ಬಂಧಿಸಿ ಅವರ ಬಳಿ ಇದ್ದ ಎರಡು ಏನ್ ಗನ್ ವಶಕ್ಕೆ ಪಡೆದಿದ್ದಾರೆ
