ಮೋದಿ 2.0 ಶಕೆ ಅಧಿಕೃತ ಆರಂಭ| ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ| ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ದೂರಿ ಸಮಾರಂಭ| ದೇಶದ 15ನೇ ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕಾರ| ಮೋದಿ ಜೊತೆ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವರು| ಕ್ಯಾಬಿನೆಟ್ ಸಚಿವರು ಮತ್ತು ರಾಜ್ಯ ಖಾತೆ ಸಚಿವರ ಪ್ರಮಾಣವಚನ| 

ನವದೆಹಲಿ(ಮೇ.30): ನರೇಂದ್ರ ಮೋದಿ ಇಂದು ದೇಶದ 15ನೇ ಪ್ರಧಾನಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ದೂರಿ ಪ್ರಮಾಣವಚನ ಸಮಾರಂಭದಲ್ಲಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಧಾನಿ ಮೋದಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

Add Asianetnews Kannada as a Preferred SourcegooglePreferred
Scroll to load tweet…

ಈ ವೇಳೆ ಪ್ರಧಾನಿ ಮೋದಿ ಜೊತೆ ಸುಮಾರು 50 ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಪ್ರಮುಖವಾಗಿ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಸದಾನಂದ್ ಗೌಡ ಸೇರಿದಂತೆ ಹಲವು ಗಣ್ಯರು ಪ್ರತಿಜ್ಞಾವಿಧಿ ಸ್ವೀಕರಿಸಿದರು.

Scroll to load tweet…

ಇಂದು ಪ್ರಮಾಣವಚನ ಸ್ವೀಕರಿಸಿದ ಗಣ್ಯರು:
ನರೇಂದ್ರ ಮೋದಿ-ಪ್ರಧಾನಮಂತ್ರಿ

Scroll to load tweet…

ಕ್ಯಾಬಿನೆಟ್ ಸಚಿವರು:

ರಾಜನಾಥ್ ಸಿಂಗ್ - ಲಖನೌ- ಉತ್ತರ ಪ್ರದೇಶ
ಅಮಿತ್ ಶಾ- ಗಾಂಧಿನಗರ-ಗುಜರಾತ್
ನಿತಿನ್ ಗಡ್ಕರಿ - ನಾಗ್ಪುರ-ಮಹಾರಾಷ್ಟ್ರ
ಸದಾನಂದ್ ಗೌಡ-ಬೆಂಗಳೂರು ಉತ್ತರ-ಕರ್ನಾಟಕ
ನಿರ್ಮಲಾ ಸೀತಾರಾಮನ್-ರಾಜ್ಯಸಭಾ-ಕರ್ನಾಟಕ
ರಾಮ್ ವಿಲಾಸ್ ಪಾಸ್ವಾನ್ - ಹಾಜಿಪುರ್- ಬಿಹಾರ
ನರೇಂದ್ರ ಸಿಂಗ್ ತೋಮರ್ - ಗ್ವಾಲಿಯರ್- ಮಧ್ಯ ಪ್ರದೇಶ
ರವಿಶಂಕರ್ ಪ್ರಸಾದ್ - ಪಾಟ್ನಾ-ಬಿಹಾರ
ಹರ್‌ಸಿಮ್ರತ್ ಕೌರ್ ಬಾದಲ್ - ಬತಿಂಡಾ-ಪಂಜಾಬ್ 
ತಾವರ್ ಚಂದ್ ಗೆಹ್ಲೋಟ್- ರಾಜ್ಯಸಭಾ- ಮಧ್ಯ ಪ್ರದೇಶ
ಡಾ. ಎಸ್ ಜೈಶಂಕರ್- ಎಂಪಿಯಾಗಿ ಇನ್ನೂ ಆಯ್ಕೆಯಾಗಬೇಕಿದೆ.
ರಮೇಶ್ ಪೋಕ್ರಿಯಾಲ್ ನಿಷನ್ -ಹರಿದ್ವಾರ - ಉತ್ತರಾಖಾಂಡ್
ಅರ್ಜುನ್ ಮುಂಡಾ - ಜಮ್ಷೆಡ್‌ಪುರ್ ಜಾರ್ಖಂಡ್
ಸ್ಮೃತಿ ಇರಾನಿ - ಅಮೇಥಿ- ಉತ್ತರ ಪ್ರದೇಶ
ಡಾ. ಹರ್ಷವರ್ಧನ್ - ಚಾಂದನಿ ಚೌಕ್- ದಿಲ್ಲಿ
ಪ್ರಕಾಶ್ ಜಾವಡೇಕರ್- ರಾಜ್ಯಸಭಾ ಸದಸ್ಯ- ಮಹಾರಾಷ್ಟ್ರ
ಪಿಯೂಷ್ ಗೋಯೆಲ್- ರಾಜ್ಯಸಭಾ ಎಂಪಿ- ಮಹಾರಾಷ್ಟ್ರ
ಧರ್ಮೇಂದ್ರ ಪ್ರಧಾನ್ - ರಾಜ್ಯಸಭಾ ಎಂಪಿ- ಒಡಿಶಾ
ಮುಖ್ತಾರ್ ಅಬ್ಬಾಸ್ ನಖ್ವಿ- ರಾಜ್ಯಸಭಾ ಸದಸ್ಯ- ಉತ್ತರ ಪ್ರದೇಶ
ಪ್ರಹ್ಲಾದ್ ಜೋಷಿ - ಧಾರವಾಡ- ಕರ್ನಾಟಕ
ಡಾ. ಮಹೇಂದ್ರನಾಥ್ ಪಾಂಡೆ - ಚಂದೌಲಿ-ಉತ್ತರ ಪ್ರದೇಶ
ಡಾ. ಅರವಿಂದ್ ಸಾವಂತ್-ಮುಂಬೈ ದಕ್ಷಿಣ- ಮಹಾರಾಷ್ಟ್ರ
ಗಿರಿರಾಜ್ ಸಿಂಗ್ -ಬೇಗುಸರೈ- ಬಿಹಾರ
ಗಜೇಂದ್ರ ಸಿಂಗ್ ಶೇಖಾವತ್- ಜೋಧಪುರ- ರಾಜಸ್ಥಾನ

Scroll to load tweet…

ರಾಜ್ಯ ಖಾತೆ ಸಚಿವರು:ಸಂತೋಷ್ ಕುಮಾರ್ ಗಂಗ್ವಾರ್- ಬರೇಲಿ- ಉತ್ತರ ಪ್ರದೇಶ 
ಇಂದ್ರಜಿತ್ ಸಿಂಗ್- ಗುರುಗ್ರಾಮ್- ಹರಿಯಾಣ
ಶ್ರೀಪಾದ್ ಯಶೋ ನಾಯಕ್ - ಉತ್ತರ ಗೋವಾ- ಗೋವಾ
ಡಾ.ಜೀತೇಂದ್ರ ಸಿಂಗ್- ಉದಮ್‌ಪುರ- ಜಮ್ಮು ಕಾಶ್ಮೀರ
ಕಿರಣ್ ರಿಜಿಜು- ಪಶ್ಚಿಮ ಅರುಣಾಚಲ-ಅರುಣಾಚಲ ಪ್ರದೇಶ
ಪ್ರಹ್ಲಾದ್ ಸಿಂಗ್ ಪಟೇಲ್- ದಾಮೋ- ಮಧ್ಯ ಪ್ರದೇಶ
ರಾಜಕುಮಾರ್ ಸಿಂಗ್- ಅರಹಾ-ಬಿಹಾರ
ಹರ್ದಿಪ್ ಸಿಂಗ್ ಪುರಿ - ರಾಜ್ಯಸಭಾ ಸದಸ್ಯ-ಪಂಜಾಬ್
ಮನ್‌ಸುಖ್ ಮಾಂಡವೀಯ -ರಾಜ್ಯಸಭಾ ಸದಸ್ಯ- ಗುಜರಾತ್
ಫಗ್ಗನ್ ಸಿಂಗ್ ಕುಲಸ್ತೆ -ಮಂಡ್ಲಾ- ಮಧ್ಯ ಪ್ರದೇಶ
ಅಶ್ವಿನ್ ಕುಮಾರ್ ಚೌಬೆ - ಬಕ್ಸರ್- ಬಿಹಾರ
ಅರ್ಜುನ್ ರಾಮ್ ಮೇಘವಾಲ್ - ಬಿಕನೇರ್- ರಾಜಸ್ಥಾನ
ಜನರಲ್ ವಿಕೆ ಸಿಂಗ್‌ - ಗಜಿಯಾಬಾದ್- ಉತ್ತರ ಪ್ರದೇಶ
ಕೃಷ್ಣಪಾಲ್ ಗುರ್ಜರ್ - ಫರಿದಾಬಾದ್ -ಹರಿಯಾಣ
ರಾವ್‌ಸಾಹೇಬ್ ದಾನ್ವೆ -ಜಲ್ನಾ- ಮಹಾರಾಷ್ಟ್ರ
ಗಂಗಾಪುರಂ ಕಿಶನ್ ರೆಡ್ಡಿ- ಸಿಖಂದರಾಬಾದ್-ತೆಲಂಗಾಣ
ಪುರುಷೋತ್ತಮ್ ರೂಪಾಲ- ರಾಜ್ಯಸಭಾ ಸದಸ್ಯ- ಗುಜರಾತ್
ರಾಮದಾಸ್ ಅಠವಾಳೆ- ರಾಜ್ಯಸಭಾ ಸದಸ್ಯ- ಮಹಾರಾಷ್ಟ್ರ
ಸಾಧ್ವಿ ನಿರಂಜನ್ ಜ್ಯೋತಿ- ಫತೇಪುರ್- ಉತ್ತರ ಪ್ರದೇಶ
ಬಾಬುಲ್ ಸುಪ್ರಿಯೋ- ಅಸಾಂನ್ಸೋಲ್-ಪಶ್ಚಿಮ ಬಂಗಾಳ
ಡಾ. ಸಂಜೀವ್ ಕುಮಾರ್ ಬಾಲಿಯಾನ್ - ಮುಜಾಫುರ್ ನಗರ
ಧೋತ್ರೆ ಸಂಜಯ್ ಶಾಮರಾವ್- ಅಕೋಲಾ- ಮಹಾರಾಷ್ಟ್ರ
ಅನುರಾಗ್ ಸಿಂಗ್ ಠಾಕೂರ್- ಹಮೀರ್ಪುರ-ಹಿಮಾಚಲ ಪ್ರದೇಶ
ಸುರೇಶ್ ಅಂಗಡಿ- ಬೆಳಗಾವಿ- ಕರ್ನಾಟಕ
ನಿತ್ಯಾನಂದ ರಾಯ್- ಹಾಜಿಪುರ್- ಬಿಹಾರ
ರತನ್ ಲಾಲ್ ಕಠಾರಿಯಾ- ಅಂಬಾಲಾ-ಹರಿಯಾಣ
ವಿ.ಮುರಳೀಧರನ್- ರಾಜ್ಯಸಭಾ- ಕೇರಳ
ರೇಣುಕಾ ಸಿಂಗ್ ಸರುತಾ-ಛತ್ತೀಸ್‌ಗಢ್- ಛತ್ತೀಸ್‌ಗಢ್
ಸೋಮ್ ಪ್ರಕಾಶ್- ಹೋಶಿಯಾರ್ಪುರ್-ಪಂಜಾಬ್
ರಾಮೇಶ್ವರ್ ತೇಲಿ- ದಿಬುರ್ಗರ್-ಅಸ್ಸಾಂ
ಪ್ರತಾಪ್ ಚಂದ್ರ ಸಾರಂಗಿ- ಬಾಲ್‌ಸೋರ್-ಒಡಿಶಾ
ಕೈಲಾಶ್ ಚೌಧರಿ- ಬಾರ್ಮಾರ್- ರಾಜಸ್ಥಾನ
ದೇವಶ್ರೀ ಚೌಧರಿ- ಪುರುಲಿಯಾ-ಪಶ್ಚಿಮ ಬಂಗಾಳ

Scroll to load tweet…