ಜೀವನದಲ್ಲಿ ಶಾಂತಿ-ನೆಮ್ಮದಿ ಹುಡುಕಿಕೊಂಡು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಪುಣ್ಯ ಕ್ಷೇತ್ರವೊಂದಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ತಮಗೆ ಆದ ನೋವನ್ನು ಹೇಳಿಕೊಂಡಿದ್ದಾರೆ. ಬಜೆಟ್ ದಿನವೇ ಡಿಕೆಶಿ ಹೇಳಿದ ಮಾತುಗಳು ಏನು? 

ತುಮಕೂರು [ಜು.5] ‘ನಾನು ಜೀವನದಲ್ಲಿ ಹಲವು ರೀತಿಯ ಕಷ್ಟ ನಷ್ಟಗಳನ್ನು ಅನುಭವಿಸಿದ್ದೇನೆ. ನೆಮ್ಮದಿ ಶಾಂತಿ ಹುಡುಕಿಕೊಂಡು ಕಾಡುಸಿದ್ದೇಶ್ವರ ಮಠಕ್ಕೆ ಬಂದಿದ್ದೇನೆ.. ಹೀಗೆಂದು ಹೇಳಿದ್ದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್.

ತಮ್ಮ ಆರಾಧ್ಯ‌ದೈವ ನೋಣವಿನಕೆರೆಯ‌ ಕಾಡುಸಿದ್ದೇಶ್ವರ ಅಜ್ಯಯ್ಯನ ಪೀಠದ‌ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ನಾನು ಸಂಕಷ್ಟಬಂದಾಗ ಸಾವಿರಾರು ಕಡೆ ಹೋಗಿರಬಹುದು ಆದರೆ ಕಾಡುಸಿದ್ದೇಶ್ವರ ಮಠವೇ ನನಗೆ ಶಕ್ತಿ,‌ಭಕ್ತಿ ಸ್ಪೂರ್ತಿ ಎಂದರು.ಅವಮಾನಿಸಿದ ಜಾಗದಲ್ಲೇ ಬೆಳೆಯಬೇಕು, ಕಳೆದು ಕೊಂಡ ಜಾಗದಲ್ಲೆ ಹುಡುಕಬೇಕು ಎಂದು ಶ್ರೀಗಳು ಹೇಳಿದ್ದಾರೆ.

ಶ್ರೀಗಳ ಈ ನುಡಿಗೆ ನಾನು ಸಾಕ್ಷಿಯಾಗಿದ್ದೇನೆ ಎಂಥಹ ಸಮಸ್ಯೆ ಬಂದರೂನನ್ನ ಹಿಂದೆ ನಿಂತಿದ್ದು ಅಜ್ಜಯ್ಯ. ಬಜೆಟ್ ಗೂ ಹೋಗದೇ ಈ ಪವಿತ್ರ ಸ್ಥಾನಕ್ಕೆ ಬಂದಿದ್ದೇನೆ ಅಷ್ಟರ ಮಟ್ಟಿಗೆ ನಾನು ಶರಣಾಗಿದ್ದೇನೆ ಎಂದು ಹೇಳಿದ್ದಾರೆ.