ಇಂದು (ಶನಿವಾರ) ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ಆರ್ಥಿಕ ಅಪರಾಧಗಳ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಆದಾಯ ತೆರಿಗೆ ವಂಚನೆ ಆರೋಪದ ವಿಚಾರಣೆಗೆ ಡಿಕೆಶಿ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ.

ಬೆಂಗಳೂರು, (ಸೆ.15) ಇಂದು (ಶನಿವಾರ) ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ಅವರು ಆರ್ಥಿಕ ಅಪರಾಧಗಳ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಆದಾಯ ತೆರಿಗೆ ವಂಚನೆ ಆರೋಪದ ವಿಚಾರಣೆಗೆ ಸಂಬಂಧ ಡಿಕೆಶಿ, ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನು ಓದಿ: ಇ.ಡಿ.ಯಿಂದ ಡಿಕೆಶಿ ಬಂಧನವಾಗುತ್ತಾ..?

ಆರ್ಥಿಕ ಅಪರಾಧಗಳ ನ್ಯಾಯಾಲಯದ ಮುಂದೆ ಶನಿವಾರ ಕಡ್ಡಾಯವಾಗಿ ಹಾಜರಾಗಬೇಕೆಂದು ಡಿಕೆಶಿಗೆ ಆದಾಯ ತೆರಿಗೆ ಇಲಾಖೆ (ಐಟಿ) ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಕೋರ್ಟ್ ಗೆ ಆಗಮಿಸಿದ್ದಾರೆ.

ಇದನ್ನು ಓದಿ: ಬಂಧನ ತಪ್ಪಿಸಲು ಡಿಕೆಶಿ ಮುಂದಿರುವ 2 ದಾರಿಗಳು

ದೆಹಲಿಯ ಹವಾಲಾ ಕೇಸ್ ನಲ್ಲಿ ಜಾಮೀನು ನೀಡುವಂತೆ ಡಿಕೆಶಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಇಂದು ಕೋರ್ಟ್ ವಿಚಾರಣೆ ನಡೆಸಲಿದೆ. ಇದ್ರಿಂದ ಡಿ.ಕೆ. ಶಿವಕುಮಾರ್ ನ್ಯಾಯಾಲದ ಮುಂದೆ ಹಾಜರಾಗಿದ್ದಾರೆ. ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಗೆ ಜಾಮೀನು ಕೊಡದಂತೆ ಐಟಿ ಇಲಾಖೆ ಪರ ವಕೀಲ ಜೀವನ್ ವಾದ ಮಂಡನೆ ಮಾಡಲಿದ್ದಾರೆ.

ಕೋರ್ಟ್ ನಲ್ಲಿ ಏನೆಲ್ಲಾ ವಿಚಾರಣೆ ನಡೆಯಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.